ಕೊಚ್ಚಿ: ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ನಟ ಜೊಜೊ ಜಾರ್ಜ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೊಚ್ಚಿಯಲ್ಲಿ ನಿನ್ನೆ ಪ್ರತಿಭಟನೆ ನಡೆಸಲಾಗಿದ್ದು ಈ ವೇಳೆ ಒಂದು ಗಂಟೆಗಳಷ್ಟು ಕಾಲ ರಾ.ಹೆದ್ದಾರಿ ಸಂಪೂರ್ಣ ಮೊಟಕುಗೊಂಡಿತು. ಈ ವೇಳೆ ಚಿತ್ರನಟ ಜೋಜೊ ಜಾರ್ಜ್ ಆಗಮಿಸಿ ತೀವ್ರವಾಗಿ ಪ್ರತಿಕ್ರಿಯಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ರೋಗಿಗಳು ನಡು ರಸ್ತೆಯಲ್ಲಿ ಪರದಾಡುವಂತಾಗಿದೆ. ಮಾಧ್ಯಮದವರೂ ಪ್ರತಿಕ್ರಿಯೆ ಕೇಳಿದ್ದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು. ಈ ವೇಳೆ ಘರ್ಷಣೆ ನಡೆಯಿತು.
ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಎರ್ನಾಕುಳಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ನಿನ್ನೆ ಪ್ರತಿಭಟನೆ ನಡೆಸಿದರು. ಬೆಳಗ್ಗೆ 11 ಗಂಟೆಗೆ ಮುಷ್ಕರ ಆರಂಭವಾಯಿತು. ಒಂದು ಗಂಟೆ ದಿಗ್ಬಂಧನ ನಡೆಯಿತು.
ವೈಟ್ಟಿಲ ರಸ್ತೆ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ. ಹಾಗಾಗಿ ಮುಷ್ಕರ ಆರಂಭವಾದ ಕೆಲವೇ ನಿಮಿಷಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ರೋಗಿಗಳನ್ನು ಹೊತ್ತೊಯ್ಯುವ ಆಂಬ್ಯುಲೆನ್ಸ್‍ಗಳಿಗೂ ಕಾರ್ಮಿಕರು ಅವಕಾಶ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಜೋಜೊ ಜಾರ್ಜ್ ತೀವ್ರ ಕುಪಿತರಾಗಿ ಪ್ರತಿಭಟಿಸಿದರು.
ಪ್ರಯಾಣಿಕರ ಸುಗಮತೆಗೆ ಯಾವ ಎಚ್ಚರಿಕೆ ತೋರಿಸಿದ್ದಾರೆ ಎ|ಂದು ಜೋಜೊ ಜಾರ್ಜ್ ಕೇಳಿದರು. ಸಿನಿಮಾ ನಟ ಸಾಮಾನ್ಯ ವ್ಯಕ್ತಿ. ಆದರೆ ಇತರ ತುರ್ತು ಕೆಲಸಕ್ಕೆ ಹೋಗುವವರ ಪಾಡೇನು. ಆಡಳಿತ ನಡೆಸುವವರು ಎಷ್ಟು ಅಪಕ್ವರಾಗಿದ್ದಾರೆ. ಗಂಟೆಗಟ್ಟಲೆ ವಾಹನ ತಡೆದು ಮುಷ್ಕರ ಪುನರಾವರ್ತನೆ ಮಾಡಬೇಡಿ. ಹೊರಗಿನವರು ಯಾರಾದರೂ ಏನು ಅಂದುಕೊಂಡಾರು ಎಂದು ಕೇಳಿದರು.
ಬಳಿಕ ವಾಗ್ವಾದ ದೈಹಿಕ ಹಲ್ಲೆಗೆ ಮುಂದುವರಿಯಿತು. ಮಹಿಳಾ ಕಾಂಗ್ರೆಸ್ಸ್ ಕಾರ್ಯಕರ್ತರುಇ ಆಕ್ರೋಶ ವ್ಯಕ್ತಪಡಿಸಿ ಜೋಜೋ ಮದ್ಯ ಸೇವಿಸಿದ್ದಾರೆ ಎಮದು ಆರೋಪಿಸಿದರು. ಜೊತೆಗೆ ಯುವ ಕಾಂಗ್ರೆಸ್ಸ್ ಕಾರ್ಯಕರ್ತರು ಜೋಜೋ ಅವರ ಕಾರಿನ ಗಾಜುಗಳನ್ನು ಪುಡಿಗಟ್ಟಿದರು. ಕೊನೆಗೆ ಆಗಮಿಸಿದ ಪೋಲೀಸರು ಜೋಜೋರನ್ನು ಸುರಕ್ಷಿತರಾಗಿ ಕಳಿಸಿದರು. ಆದರೆ ಜೋಜೋ ನೇರವಾಗಿ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆ ನಡೆಸಿ ಮದ್ಯ ಸೇವಿಸಿಲ್ಲ ಎಂದು ಖಾತ್ರಿಪಡಿಸಿದರು. ಇದು ಮಹಿಳಾ ಕಾಂಗ್ರೆಸ್ಸ್ ಗೆ ಮುಖಭಂಗವಾಗಿದೆ. ಪೋಲೀಸರು ಕಾಂಗ್ರೆಸ್ಸ್ ಕಾರ್ಯಕರ್ತರ ಮೇಲೆ ದೂರು ದಾಖಲಿಸಿದ್ದಾರೆ.