ಪೆರ್ಲ; ಎಣ್ಮಕಜೆ ಗ್ರಾಮ ಪಂಚಾಯತಿ ವತಿಯಿಂದ ಪಂಚಾಯತಿನ ಸ್ವಚ್ಛತಾ ಯೋಜನೆಯ ಅಂಗವಾಗಿ ಪ್ಲಾಸ್ಡಿಕ್ ತ್ಯಾಜ್ಯ ಸಂಗ್ರಹಣಾ ಹಾಗೂ ವಿಲೇವಾರಿ ಕಾರ್ಯದ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯರಿಗೆ ಸಮವಸ್ತ್ರ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸಾಗಾಟದ ಟ್ರೋಲಿ ಮತ್ತು ಇನ್ನಿತರ ಅಗತ್ಯ ಸಲಕರಣಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಬಗ್ಗೆ ಪಂಚಾಯತು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತು ಅಧ್ಯಕ್ಷ ಸೋಮಶೇಖರ ಜೆ.ಎಸ್.ಅವರು ಸಮವಸ್ತ್ರ ನೀಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಂ.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಸೌದಾಬಿ ಹನೀಫ್, ಪಂ.ಸದಸ್ಯರಾದ ಮಹೇಶ್ ಭಟ್, ರಾಮಚಂದ್ರ ಎಂ,ರಮ್ಲ, ಝರಿನಾ, ಉಷಾ ಕುಮಾರಿ, ಆಶಾಲತಾ,ಇಂದಿರಾ, ಪಂಚಾಯತ್ ಸಹಾಯಕ ಕಾರ್ಯದರ್ಶಿ ವಿಪಿನ್ , ಗ್ರಾಮ ವಿಸ್ತಾರಣಾಧಿಕಾರಿ ಸನು, ಸಿಡಿಎಸ್ ಅಧ್ಯಕ್ಷೆ ಶಾರದ ಮೊದಲಾದವರು ಪಾಲ್ಗೊಂಡರು.
ಪಂಚಾಯತಿಯ ಪ್ರತಿ ವಾರ್ಡಿನ ಮನೆ ಮನೆಗಳಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಹರಿತ ಕರ್ಮ ಸೇನಾ ಕಾರ್ಯಕರ್ತರಿಗೆ ನೀಡಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.