ಕಾಸರಗೋಡು: ಕೆರಳದಲ್ಲಿ ಸಾರಾಯಿ ನಿಷೇಧದ ನಂತರ ಕೆಲಸ ಕಳೆದುಕೊಂಡ ಮದ್ಯ ಕಾರ್ಮಿಕರ ಪುನರ್ವಸತಿ ಸಂಘಟನೆ(ಎಂಟಿಪಿಯು)ಸಮಾವೇಶ ಕರಂದಕ್ಕಾಡಿನ ಬಿಲ್ಲವ ಸೇವಾ ಸಂಘ ಸಭಾಂಗಣದಲ್ಲಿ ಭಾನುವಾರ ಜರುಗಿತು.
ಸಂಘಟನೆ ಜಿಲ್ಲಾ ರಕ್ಷಾಧಿಕಾರಿ ನಾರಾಯಣನ್ ಕೊನ್ನಕ್ಕಾಡ್ ಸಮಾರಂಭ ಉದ್ಘಾಟಿಸಿದರು. ಕಾರ್ಯದರ್ಶಿ ಟಿ.ಆರ್. ರಂಜಿತ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ರಾಘವನ್ ಕೋನಲ, ಜಿಲ್ಲಾ ಸಮಿತಿ ಸದಸ್ಯ ಜೋಸ್ ಇರಿಯ, ಮಾಧವನ್ ಅರಿಪೊಯಿಲ್ ಉಪಸ್ಥಿತರಿದ್ದರು. ವಿಜಯ ಕುಮಾರ್ ಕುಂಡಂಕುಯಿ ಸ್ವಾಗತಿಸಿದರು. ಸಂಘಟನೆಯ ವಿವಿಧ ವಲಯಗಳ ಸದಸ್ಯರು ಪಾಲ್ಗೊಂಡಿದ್ದರು.