HEALTH TIPS

ಕಣ್ಣೂರಿನಲ್ಲಿ ನಕ್ಸಲ್ ನಾಯಕನನ್ನು ಬಂಧಿಸಿದ ಎನ್.ಐ.ಎ

Top Post Ad

Click to join Samarasasudhi Official Whatsapp Group

Qries

                         ಕಣ್ಣೂರು: ಕಣ್ಣೂರಿನಲ್ಲಿ ನಕ್ಸಲ್ ಭಯೋತ್ಪಾದಕ ಮುಖಂಡನನ್ನು ಬಂಧಿಸಲಾಗಿದೆ. ಗೌತಮ್ ಅಲಿಯಾಸ್ ಮುರಕನ್ ಬಂಧಿತ ಆರೋಪಿ. ಆತನನ್ನು ಎನ್‍ಐಎ ಬಂಧಿಸಿದೆ. ಮುರುಗನ್ 2017ರ ಆಯುಧ ತರಬೇತಿಯಲ್ಲಿ ಭಾಗವಹಿಸಿದ್ದ ಎಂದು ತಿಳಿದು ಬಂದಿದೆ.

                  ಕಣ್ಣೂರಿನ ಪಾಪ್ಪನಶ್ಚೇರಿಯಲ್ಲಿ ಎನ್‍ಐಎ ತಂಡ ಮುರುಗನ್‍ನನ್ನು ಬಂಧಿಸಿದೆ. ಇದಕ್ಕೂ ಮುನ್ನ ಮುರುಗನ್ ಆಯುಧ ತರಬೇತಿ ನೀಡುತ್ತಿರುವ ದೃಶ್ಯಾವಳಿಗಳು ಬಿಡುಗಡೆಯಾಗಿದ್ದವು. ಬಹಳ ದಿನಗಳಿಂದ ಪಾಪನಶ್ಚೇರಿ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ನಂತರ ನಡೆದ ತನಿಖೆಯಲ್ಲಿ ಮುರುಗನ್ ನನ್ನು ಬಂಧಿಸಲಾಯಿತು.

           ಶನಿವಾರ ರಾತ್ರಿ ಮುರುಗನ್ ನನ್ನು ಬಂಧಿಸಲಾಗಿದೆ ಎಂಬುದು ಖಚಿತ ಮಾಹಿತಿ. ಮುರುಕನ್ ನಕ್ಸಲ್ ಭಯೋತ್ಪಾದಕರ ಸಂದೇಶವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆತನ ಮತ್ತಿಬ್ಬರು ಸಹಚರರನ್ನು ಎನ್‍ಐಎ ನಿಗಾ ವಹಿಸಿರುವ ಬಗ್ಗೆ ಸೂಚನೆಗಳಿವೆ.

                 ಥಂಡರ್ ಬೋಲ್ಟ್ ಜತೆಗಿನ ಘರ್ಷಣೆಯಲ್ಲಿ ಮೃತಪಟ್ಟ ಕುಪ್ಪು ದೇವರಾಜ್, ವೇಲ್ಮುರುಗನ್, ಅಜಿತ್ ಸೇರಿದಂತೆ 19 ಆರೋಪಿಗಳು ಪ್ರಕರಣದಲ್ಲಿದ್ದಾರೆ. ಭಯೋತ್ಪಾದನಾ ನಿಗ್ರಹ ದಳ ತನಿಖೆ ನಡೆಸಿದ್ದ ಪ್ರಕರಣವನ್ನು ಒಂದು ತಿಂಗಳ ಹಿಂದೆ ಎನ್‍ಐಎ ತನ್ನ ವಶಕ್ಕೆ ತೆಗೆದುಕೊಂಡಿತ್ತು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries