ತಿರುವನಂತಪುರ: ಕೇರಳದ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ವಿಪುಲ ಸಾಧ್ಯತೆಗಳ ಬಗ್ಗೆ ಮಾಹಿತಿ ವಿನಿಮಯಕ್ಕಾಗಿ ವಿಯೆಟ್ನಾಂ ಸಂಘದ ನಿಯೋಗ ಕೇರಳಕ್ಕೆ ಭೇಟಿ ನೀಡಿತು. ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಕೇರಳವನ್ನು ಹೋಲುವ ವಿಯೆಟ್ನಾಂ ಈ ರಂಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದು, ಈ ಅನುಭವ ಮತ್ತು ತಂತ್ರಜ್ಞಾನವನ್ನು ಕೇರಳಕ್ಕೆ ವರ್ಗಾಯಿಸುವ ನಿಟ್ಟಿನಲ್ಲಿ ಭೇಟಿಗೆ ಹೆಚ್ಚಿನ ಮಹತ್ವ ಕಲ್ಪಿಸಲಾಗಿದೆ. ಭಾರತದಲ್ಲಿನ ವಿಯೆಟ್ನಾಂ ರಾಯಭಾರಿ ಫಾಮ್ ಸಾಂಗ್ ಚು ನೇತೃತ್ವದ ಆರು ಸದಸ್ಯರನ್ನೊಳಗೊಂಡ ಸಂಘ ನಡೆಸಿದ ಕೇರಳ ಭೇಟಿಯ ಸಂದರ್ಭದಲ್ಲಿ, ಈ ಕ್ಷೇತ್ರದ ಭವಿಷ್ಯದ ಸಾಧ್ಯತೆಗಳ ಬಗ್ಗೆ ವ್ಯಾಪಕವಾದ ಚರ್ಚೆ ಮತ್ತು ಅಭಿಪ್ರಾಯಗಳ ವಿನಿಮಯ ನಡೆಸಲಾಯಿತು.
ತಿರುವನಂತಪುರಂನ ಮಸ್ಕತ್ ಹೋಟೆಲ್‍ನಲ್ಲಿ ನಡೆದ ಕೇರಳ-ವಿಯೆಟ್ನಾಂ ಸಹಕಾರ ಕಾರ್ಯಾಗಾರ ಚರ್ಚೆಗಳ ಮುಖ್ಯ ವೇದಿಕೆಯಾಗಿದೆ. ಉಭಯ ಪ್ರದೇಶಗಳು ಸಹಕರಿಸಬಹುದಾದ ಕೃಷಿ, ಮೀನುಗಾರಿಕೆ, ಉನ್ನತ ಶಿಕ್ಷಣ, ಐಟಿ ಮತ್ತು ಕೈಗಾರಿಕೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆಗಳ ಸಚಿವರು, ತಜ್ಞರು ಮತ್ತು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ವಿಸ್ತೃತ ಚರ್ಚೆಗಳು ನಡೆಯಿತು. ಈ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವು ವಿಶಾಲವಾದ ಸಾಧ್ಯತೆಗಳನ್ನು ತೆರೆಯುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಹೇಳಿದರು.
ಮೀನುಗಾರಿಕಾ ಸಚಿವ ಸಜಿ ಚೆರಿಯನ್, ಯೋಜನಾ ಮಂಡಳಿಯ ಉಪಾಧ್ಯಕ್ಷ ಪೆÇ್ರ. ವಿ.ಕೆ. ರಾಮಚಂದ್ರನ್, ಮುಖ್ಯ ಕಾರ್ಯದರ್ಶಿ ಡಾ. ವಿ.ಪಿ ಜಾಯ್, ವಿಶೇಷ ಕರ್ತವ್ಯದ ಅಧಿಕಾರಿ (ವಿದೇಶಾಂಗ ವ್ಯವಹಾರಗಳು) ವೇಣು ರಾಜಮಣಿ, ಮುಖ್ಯಮಂತ್ರಿಗಳ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬ್ರಹಾಂ, ವಿಯೆಟ್ನಾಂ ನಿಯೋಗದ ಸದಸ್ಯರಾದ ರಾಜಕೀಯ ಕೌನ್ಸಿಲರ್ ಗುಯೆನ್ ಥಿ ನಾಗೊಕ್ ಡೂಂಗ್, ಕೌನ್ಸಿಲರ್ ಗುಯೆನ್ ಥಿ ತಾನ್ಸುವಾನ್, ಟ್ರೇಡ್ ಕೌನ್ಸಿಲರ್ ಬುಯಿ ಟ್ರುಂಗ್ ತುವಾಂಗ್, ಪತ್ರಿಕಾ ಅಟ್ಯಾಚೆ ಸಾನ್ ಹೋವಾಂಗ್ ಮೆಡುಂಗ್, ಕೇರಳ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ವಿ.ಪಿ ಮಾಧವನ್ ಪಿಳ್ಳೈ ಮುಂತಾದವರು ಉಪಸ್ಥಿತರಿದ್ದರು.