ಬದಿಯಡ್ಕ: ಕುಂಬಳೆ ವಲಯ ಬಂಟರ ಸಂಘದ ನೇತೃತ್ವದಲ್ಲಿ ಬದಿಯಡ್ಕ ಬೋಳುಕಟ್ಟೆಯಲ್ಲಿ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ಸಂಪನ್ನಗೊಂಡಿತು. ಶನಿವಾರ ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕುಂಬಳೆ ವಲಯಾಧ್ಯಕ್ಷ ವಳಮಲೆ ಪದ್ಮನಾಭ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯದರ್ಶಿ ಅಶೋಕ್ ರೈ, ಪಂಚಾಯತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಕ್ರೀಡಾಕೂಟದ ಸಂಚಾಲಕ ಗುರುರಾಜ್ ರೈ, ಪೃಥ್ವಿರಾಜ್ ರೈ ಉಪಸ್ಥಿತರಿದ್ದರು.
ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಹಿಸಿದ್ದರು. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ , ಜಿಲ್ಲಾ ಉಪಾಧ್ಯಕ್ಷ ಪಿಜಿ ಚಂದ್ರಹಾಸ ರೈ ಬಹುಮಾನ ವಿತರಿಸಿದರು. ಕಾರ್ಯದರ್ಶಿ ಅಶೋಕ ರೈ, ಕೋಶಾಧಿಕಾರಿ ಬಿಎಸ್ ಗಾಂಭೀರ್, ಪಂಚಾಯತಿ ಘಟಕದ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ , ಹರೀಶ ಆಳ್ವ ಉಜಾರ್, ಜಯ ಪ್ರಸಾದ ರೈ ಬೇಳ, ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಶರತ್ ಚಂದ್ರ ಶೆಟ್ಟಿ ಶೇಣಿ ಉಪಸ್ಥಿತರಿದ್ದರು. ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಗುರುರಾಜ ರೈ ವಂದಿಸಿದರು. ಪ್ರಥಮ ಬಹುಮಾನವನ್ನು ರಾಯಲ್ ಬಂಟ್ಸ್ ಬಂಬ್ರಾಣ ತಂಡ ಮತ್ತು ದ್ವಿತೀಯ ಬಹುಮಾನವನ್ನು ಬಂಟ್ಸ್ ವಾರಿಯರ್ಸ್ ಬಳ್ಳೂರು ತಂಡ ತನ್ನದಾಗಿಸಿಕೊಂಡಿತು.