ಲಂಡನ್: ದಕ್ಷಿಣ ಆಫ್ರಿಕಾ ಲೇಖಕ ಡೆಮನ್ ಗಾಲ್ಗಟ್ ಅವರು ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ವರ್ಣಭೇದ ಇತಿಹಾಸದ ಬಗ್ಗೆ ಬಿಳಿಯ ಕುಟುಂಬದ ಎಣಿಕೆ ಕುರಿತ 'ದ ಪ್ರಾಮಿಸ್' ಕೃತಿಗಾಗಿ ಈ ಗೌರವ ಸಂದಿದೆ.
ಲಂಡನ್: ದಕ್ಷಿಣ ಆಫ್ರಿಕಾ ಲೇಖಕ ಡೆಮನ್ ಗಾಲ್ಗಟ್ ಅವರು ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ವರ್ಣಭೇದ ಇತಿಹಾಸದ ಬಗ್ಗೆ ಬಿಳಿಯ ಕುಟುಂಬದ ಎಣಿಕೆ ಕುರಿತ 'ದ ಪ್ರಾಮಿಸ್' ಕೃತಿಗಾಗಿ ಈ ಗೌರವ ಸಂದಿದೆ.
ಸುಮಾರು 69 ಸಾವಿರ ಡಾಲರ್ ಮೌಲ್ಯದ ಈ ಪ್ರಶಸ್ತಿಗೆ ಗಾಲ್ಗಟ್ ಅವರು ಬ್ರಿಟಿಶ್ ಬುಕ್‌ಮೇಕರ್‌ಗಳ ಫೇವರಿಟ್ ಆಗಿದ್ದರು.
ಮೂರನೇ ಬಾರಿಗೆ ಫೈನಲಿಸ್ಟ್ ಆಗಿ ಹೊರಹೊಮ್ಮಿದ ಗಾಲ್ಗಟ್ ಅಂತಿಮವಾಗಿ ಈ ಬಾರಿ ಪ್ರಶಸ್ತಿಗೆ ಭಾಜನರಾದರು. ಪುಸ್ತಕ ನಿರ್ಣಯಗಾರರು ಈ ಕೃತಿಯನ್ನು 'ಟೂರ್ ಡೆ ಫೋರ್ಸ್' ಎಂದು ಬಣ್ಣಿಸಿದ್ದಾರೆ. ಈ ಹಿಂದೆ ಇವರ 'ದ ಗುಡ್ ಡಾಕ್ಟರ್' 2003ರಲ್ಲಿ ಹಾಗೂ 'ಇನ್ ಎ ಸ್ಟ್ರೇಂಜ್ ರೂಮ್' 2010ರಲ್ಲಿ ನಾಮನಿರ್ದೇಶನಗೊಂಡಿತ್ತು. ಆದರೆ ಎರಡೂ ಬಾರಿ ಪ್ರಶಸ್ತಿ ದಕ್ಕಿರಲಿಲ್ಲ. ಫೇವರಿಟ್ ಆಗಿದ್ದೂ, ಈ ಪ್ರಶಸ್ತಿ ಗೆದ್ದಿರುವುದು ನಿಬ್ಬೆರಗಾಗಿಸಿದೆ ಎಂದು ಗಾಲ್ಗಟ್ ಪ್ರತಿಕ್ರಿಯಿಸಿದ್ದಾರೆ.
"ನಾನು ಅವಿಭಾಜ್ಯ ಅಂಗವಾಗಿರುವ ಗಮನಾರ್ಹ ಖಂಡದ ಕೇಳಿದ ಹಾಗೂ ಕೇಳದ, ಹೇಳಿದ ಮತ್ತು ಹೇಳದ ಕಥೆಗಳ ಪರವಾಗಿ ನಾನು ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.