ಕಾಸರಗೋಡು: ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ತಳಂಗರೆ ಚಿಲ್ಡ್ರನ್ಸ್ ಪಾರ್ಕ್ ತೆರೆದು ಕಾರ್ಯಾಚರಿಸಲಾರಂಭಿಸಿದೆ. ಒಂದುವರೆ ವರ್ಷಕ್ಕೂ ಹೆಚ್ಚು ಸಮಯದಿಂದ ಮುಚ್ಚಲಾಗಿದ್ದ ಪಾರ್ಕನ್ನು ಇತ್ತೀಚೆಗಷ್ಟೆ ಶುಚೀಕರಿಸಿ, ಪ್ರವಾಸಿಗರಿಗೆ ತೆರವುಗೊಳಿಸುತ್ತಿದ್ದಂತೆ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಇಲ್ಲಿ ಬರಲಾರಂಭಿಸಿದ್ದಾರೆ.
ರಜಾ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ತಳಂಗರೆಯ ಚಿಲ್ಡ್ರನ್ಸ್ ಪಾರ್ಕ್‍ಗೆ ಆಗಮಿಸುತ್ತಿದ್ದು, ಇವರೊಂದಿಗೆ ಕುಟುಂಬದ ಹಿರಿಯರೂ ಆಗಮಿಸಿ ಇಲ್ಲಿನ ಪ್ರಕೃತಿ ಸಔಂದರ್ಯ ವೀಕ್ಷಿಸುತ್ತಿದ್ದಾರೆ. ಕಾಸರಗೋಡು ನಗರಸಭೆ ಅಧೀನದಲ್ಲಿ ಕಾರ್ಯಾಚರಿಸುವ ಇಲ್ಲಿನ ಉದ್ಯಾನ ಸಮುದ್ರದ ಅಂಚಿಗಿದ್ದು, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.