ಮುಳ್ಳೇರಿಯ: ಉಡುಪಿಯ ಪ್ರತಿಷ್ಠಿತ "ಯಕ್ಷಗಾನ ಕಲಾರಂಗ ಪ್ರಶಸ್ತಿ"ಗೆ ಬೆಳ್ಳೂರು ನಿವಾಸಿಯೂ , ವೃತ್ತಿಪರ ಯಕ್ಷಗಾನ ಕಲಾವಿದರಾದ ಅಪ್ಪಕುಂಞ್ಞ ಮಣಿಯಾಣಿ ಮಿಂಚಿಪದವು ಅವರನ್ನು ಆಯ್ಕೆ ಮಾಡಲಾಗಿದೆ.
ತೆಂಕುತಿಟ್ಟಿನ ಪ್ರಸಿದ್ಧ ಕಟೀಲು ಮೇಳದ ಖ್ಯಾತ ಕಲಾವಿದರಾದ ಅಪ್ಪಕುಂಞ್ಞ ಮಣಿಯಾಣಿ ಕಳೆದ ಮೂರೂವರೆ ದಶಕಗಳಿಂದ ಯಕ್ಷ ಸೇವೆಗೈಯುತ್ತಿದ್ದು ಧರ್ಮಸ್ಥಳ,ಕಟೀಲು, ಕದ್ರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.
20 ಸಾವಿರ ನಗದು ಪುರಸ್ಕಾರ,ಪ್ರಶಸ್ತಿ ಪತ್ರವನ್ನೊಳಗೊಂಡ ಗೌರವವನ್ನು ನವೆಂಬರ್ 28ರಂದು ಅಪರಾಹ್ನ 2ಗಂಟೆಯ ಬಳಿಕ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅಪ್ಪಕುಂಞÂ್ಞ ಮಣಿಯಾಣಿ ಅವರಿಗೆ ಸಮರ್ಪಿಸಲಾಗುತ್ತಿದೆ ಎಂದು ಯಕ್ಷಗಾನ ಕಲಾರಂಗದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.