ತಿರುವನಂತಪುರ; ರಾಜಧಾನಿಯ ನ್ಯಾಯಾಲಯದ ಕೊಠಡಿಯೊಳಗೆ ಕಳ್ಳತನ ನಡೆದ ಘಟನೆ ನಡೆದಿದೆÀ. ಪೋಲೀಸ್ ಅಧಿಕಾರಿಯೋರ್ವರ ಮೊಬೈಲ್ ಪೋನ್ ಕದಿಯಲಾಗಿದೆ. ಪೇಟ ಠಾಣೆಯ ಸಿವಿಲ್ ಪೋಲೀಸ್ ಅಧಿಕಾರಿ ವಿಜಿ ಶೈನ್ ಅವರ ಪೋನ್ ನಾಪತ್ತೆಯಾಗಿದೆ.
ವಿಜಿ ಶೈನ್ ಅವರ ೧೮ ಸಾವಿರ ಮೌಲ್ಯದ ಪೋನ್ ನ್ನು ಕಳ್ಳನು ಕೊಂಡೊಯ್ದಿದ್ದಾರೆ. ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ವಿವಿಜಾ ರವೀಂದ್ರನ್ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸಾಮಾನ್ಯ ಪ್ರಕರಣಗಳ ಕಡತ ಎತ್ತಲು ಪೋಲೀಸ್ ಅಧಿಕಾರಿ ನ್ಯಾಯಾಲಯದ ಕಚೇರಿಗೆ ತೆರಳಿದರು. ಹಿಂತಿರುಗಿ ನೋಡಿದಾಗ ಪೋನ್ ನಾಪತ್ತೆಯಾಗಿರುವುದು ಗೊತ್ತಾಯಿತು.
ಶೈನ್ ಅವರು ನ್ಯಾಯಾಲಯದ ಕರ್ತವ್ಯದಿಂದ ವಿಮುಖರಾಗಲು ತಕ್ಷಣ ಸಾಧ್ಯವಾಗದ ಕಾರಣ ಪೋನ್ ಕಳವಿನ ಬಗ್ಗೆ ಪೋಲೀಸರಿಗೆ ದೂರು ನೀಡಲು ಸಾಧ್ಯವಾಗಲಿಲ್ಲ. ಶೈನ್ ಅವರ ಪೋನ್ ಈಗ ಸ್ವಿಚ್ ಆಫ್ ಆಗಿದೆ. ಪೋನ್ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.