ಕಾಸರಗೋಡು: ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮ ವಿಸ್ತೃತವಾಗಿ ಜರುಗಲಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅವರು ತಿಳಿಸಿದರು.
ಏಡ್ಸ್ ನಿಯಂತ್ರಣ ದಿನಾಚರಣೆ ಅಂಗವಾಗಿ ನ.30ರಂದು ಕೇರಳ ರಾಜ್ಯ ಏಡ್ಸ್ ಕಂಟ್ರೋಲ್ ಸೊಸೈಟಿ, ಜಿಲ್ಲಾ ಮೆಡಿಕಲ್ ಆಫೀಸ್, ರಾಷ್ಟ್ರೀಯ ಆರೋಗ್ಯ ದೌತ್ಯ, ವಿವಿಧ ಸ್ವಯಂ ಸೇವಾ ಸಂಘಟನೆಗಳು ಇತ್ಯಾದಿಗಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದವರು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನುಡಿದರು.
ಅಂದು ಸಂಜೆ 6 ಗಂಟೆಗೆ ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡು ಹಳೆಯ ಬಸ್ ನಿಲ್ದಾಣ ಇತ್ಯಾದಿ ಕಡೆ ದೀಪ ಬೆಳೆಗುವಿಕೆ ನಡೆಯಲಿದೆ. ವಿಶ್ವ ಏಡ್ಸ್ ದಿನಾಚರಣೆಯ ದಿನವಾಗಿರುವ ಡಿ.1ರಂದು ಬೆಳಗ್ಗೆ 11 ಗಂಟೆಗೆ ಕಾಸರಗೋಡು ನಗರಸಭೆ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಶಾಸಕ ಎನ್,ಎ,ನೆಲ್ಲಿಕುನ್ನು ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಮೊದಲಾದವರು ಭಾಗವಹಿಸುವರು. ತದನಂತರ ರಸಪ್ರಶ್ನೆ ಸ್ಪರ್ಧೆ ನಡೆಯಲಿವೆ. ಜಿಲ್ಲೆಯ ವಿವಿಧೆಡೆ ಡಿಜಿಟಲ್ ಪೆÇೀಸ್ಟರ್ ನಿರ್ಮಾಣ, ಭಾಷಣ ಸ್ಪರ್ಧೆ, ಸ್ಕಿಟ್, ಫ್ಲಾಷ್ ಮೋಬ್ ಮೊದಲಾದ ಕಾರ್ಯಕ್ರಮಗಳು ಜರುಗಲಿವೆ.
ಕಾಸರಗೋಡು ಜಿಲ್ಲೆಯಲ್ಲಿ ಈಗ 857 ಮಂದಿ ಎಚ್.ಐ.ವಿ. ಸೋಂಕು ಬಾಧಿತರು
ಕಾಸರಗೋಡು ಜಿಲ್ಲೆಯಲ್ಲಿ ಈಗ 857 ಮಂದಿ ಎಚ್.ಐ.ವಿ. ಸೋಂಕು ಬಾಧಿತರು ಇದ್ದಾರೆ. ಇವರಲ್ಲಿ 430 ಮಂದಿ ಮಹಿಳೆಯರು, 397 ಮಂದಿ ಪುರುಷರು, 14 ಮಂದಿ ಬಾಲಕರು, 16 ಮಂದಿ ಬಾಲಕಿಯರು ಇದ್ದಾರೆ.
ಏಡ್ಸ್ ನಿಯಂತ್ರಣ ಚಟುವಟಿಕೆಗಳ ಅಂಗವಾಗಿ ಜಿಲ್ಲೆಯಲ್ಲಿ 7 ಜ್ಯೋತಿಸ್ ಕೇಂದ್ರಗಳು, 10 ಪೆಸಿಲಿಟೇಟೆಡ್ ಇನ್ ಗ್ರೇಟೆಡ್ ಕೌನ್ಸಿಲಿಂಗ್ ತಪಾಸಣೆ ಕೇಂದ್ರಗಳು, ಕಾಞಂಗಾಡು ಜಿಲ್ಲಾ ಆಸ್ಪತ್ರೆಯಲ್ಲಿ ಲೈಂಗಿಕ ರೋಗ ಚಿಕಿತ್ಸಾ ಕೇಂದ್ರವಾಗಿರುವ ಪುಲರಿ, ಎಚ್.ಐ.ವಿ. ಬಾಧಿತರ ಚಿಕಿತ್ಸಾ ಕೇಂದ್ರವಾಗಿರುವ ಕಾಸರಗೋಡು ಜನರಲ್ ಆಸ್ಪತ್ರೆಯ ಉಷಸ್, ಸಲಿಂಗ ಕಾಮಿಗಳು, ಮಹಿಳಾ ಲೈಂಗಿಕ ಕಾರ್ಮಿಕರು, ಟ್ರಾನ್ಸ್ ಜೆಂಡರ್ಸ್, ಇತರ ರಾಜ್ಯಗಳ ಕಾರ್ಮಿಕರು, ಟ್ರಕ್ಕರ್ಸ್ ಇತ್ಯಾದಿ ಮಂದಿಗಳನ್ನು ಗುರಿಯಾಗಿಸಿ ಸ್ವಯಂ< ಸೇವೆ ನಡೆಸುವ 5 ಸುರಕ್ಷಾ ಪ್ರಾಕೆಕ್ಟ್ಗಳು ಚಟುವಟಿಕೆಯಲ್ಲಿವೆ. ಎಚ್.ಐ.ವಿ. ತಪಾಸಣೆ , ಐ.ಆರ್.ಟಿ.ಚಿಕಿತ್ಸೆ ಇತ್ಯಾದಿ ಉಚಿತವಾಗಿದೆ.
ಜಿಲ್ಲೆಯಲ್ಲಿ 59 ಎಚ್.ಐ.ವಿ. ಕೇಸುಗಳಲ್ಲಿ ತಾಯಿಯಿಂದ ಗರ್ಭಸ್ಥ ಶಿಶುವಿಗೆ ಸೋಂಕು ಬಾಧೆ ಹರಡಿರುವುದು ವರದಿಯಾಗಿದೆ. ಎಚ್.ಐ.ವಿ. ಬಾಧಿತವಾಗಿ ಇನ್ನು ಮುಂದೆ ಒಂದೇ ಒಂದು ಶಿಶು ಜನಿಸಕೂಡದು ಎಂಬ ಗುರಿಯೊಂದಿಗೆ ಕಾಸರಗೋಡು ಜಿಲ್ಲೆಯ ಎಲ್ಲ ಗರ್ಭಿಣಿಯರಿಗೆ , ಅವರ ಗರ್ಭಸ್ಥ ಸ್ಥಿತಿಯ ಮೊದಲ 3 ತಿಂಗಳ ಅವಧಿಯಲ್ಲಿ ಎಚ್.ಐ.ವಿ. ಸೋಂಕು ಪತ್ತೆ ತಪಾಸಣೆ ನಡೆಸಬೇಕು. ಎಚ್.ಐ.ವಿ. ಪಾಸಿಟಿವ್ ಆಗಿದ್ದರೆ ಐ.ಆರ್.ಟಿ.ಚಿಕಿತ್ಸೆಗೆ ಒಳಗಾಗಿ ಗರ್ಭಸ್ಥ ಶಿಶುವನ್ನು ಎಚ್.ಐ.ವಿ. ಸೋಂಕಿನಿಂದ ಸಂರಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಗರ್ಭಿಣಿಯರಿಗಾಗಿ ಜಿಲ್ಲೆಯ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಎಚ್.ಐ.ವಿ. ತಪಾಸಣೆ ಸೌಲಭ್ಯ ಉಚಿತವಾಗಿದೆ ಎಂದವರು ತಿಳಿಸಿದರು.
ಜಿಲ್ಲಾ ವಾರ್ತಾ ಇಲಾಖೆಯ ಪಿ.ಆರ್.ಛೇಂಬರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್ ನಿಐಮತ್ರಣ ಅಧಿಕಾರಿ ಡಾ.ಟಿ.ಪಿ.ಆಮಿನಾ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಜಿಲ್ಲಾ ಶಿಕ್ಷಣ ಮತ್ತು ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಮೊದಲಾದವರು ಉಪಸ್ಥಿತರಿದ್ದರು.