ನವದೆಹಲಿ: ಕೋವಿಡ್ ಲಸಿಕೆ ಪಡೆಯಬೇಕು ಎಂಬುದನ್ನು ಕೆಲವೆಡೆ ಸ್ಥಳೀಯ ಆಡಳಿತ, ಕಂಪನಿಗಳು ಮತ್ತು ಸಂಘಸಂಸ್ಥೆಗಳು ಕಡ್ಡಾಯಗೊಳಿಸಿವೆ. 'ಲೋಕಲ್‌ಸರ್ಕಲ್' ಹೆಸರಿನ ಡಿಜಿಟಲ್ ವೇದಿಕೆ ಈಚೆಗೆ ನಡೆಸಿದ ಸಮೀಕ್ಷೆಯಿಂದ ಇದು ತಿಳಿದುಬಂದಿದೆ.
ನವದೆಹಲಿ: ಕೋವಿಡ್ ಲಸಿಕೆ ಪಡೆಯಬೇಕು ಎಂಬುದನ್ನು ಕೆಲವೆಡೆ ಸ್ಥಳೀಯ ಆಡಳಿತ, ಕಂಪನಿಗಳು ಮತ್ತು ಸಂಘಸಂಸ್ಥೆಗಳು ಕಡ್ಡಾಯಗೊಳಿಸಿವೆ. 'ಲೋಕಲ್‌ಸರ್ಕಲ್' ಹೆಸರಿನ ಡಿಜಿಟಲ್ ವೇದಿಕೆ ಈಚೆಗೆ ನಡೆಸಿದ ಸಮೀಕ್ಷೆಯಿಂದ ಇದು ತಿಳಿದುಬಂದಿದೆ.
328 ಜಿಲ್ಲೆಗಳಲ್ಲಿ 36 ಸಾವಿರ ನಾಗರಿಕರಿಂದ ಪ್ರತಿಕ್ರಿಯೆ ಪಡೆಯಲಾಗಿದೆ. ಪ್ರತಿಕ್ರಿಯಿಸಿದವರಲ್ಲಿ ಶೇ 26ರಷ್ಟು ಮಂದಿ ಸ್ಥಳೀಯ ಆಡಳಿತವು ಜಿಲ್ಲೆಯ ಕೆಲವು ಅಥವಾ ಎಲ್ಲ ನಿವಾಸಿಗಳಿಗೆ ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿವೆ ಎಂದು ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ, ಅಕ್ಟೋಬರ್ 8 ರಂದು ಗೋವಾದಲ್ಲಿನ ಬಾಂಬೆ ಹೈಕೋರ್ಟ್‌ನಲ್ಲಿ 'ಕೋವಿಡ್-19' ಲಸಿಕೆ ಹಾಕುವುದು ಸಾಮಾಜಿಕ ಬದ್ಧತೆಯಾಗಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಅಗತ್ಯವಾಗಿದೆ' ಎಂದು ಪ್ರಮಾಣಪತ್ರ ಸಲ್ಲಿಸಿದೆ.
'ಜವಾಬ್ದಾರಿಯುತ ನಾಗರಿಕನಾಗಿ, ಪ್ರತಿಯೊಬ್ಬ ವ್ಯಕ್ತಿ ಸಹಜವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುಬೇಕು. ಆದರೆ, ಯಾವುದೇ ವ್ಯಕ್ತಿಗೆ ಬಲವಂತವಾಗಿ ಅವಳ/ಅವನ ಇಚ್ಛೆಗೆ ವಿರುದ್ಧವಾಗಿ ಲಸಿಕೆ ಹಾಕಿಸಲಾಗದು' ಎಂದು ಸಮೀಕ್ಷೆಯು ಹೇಳಿದೆ.