ಕಾಸರಗೋಡು: ಜಿಲ್ಲೆಯ ವಿವಿಧ ನೋಂದಾವಣಾಕಚೇರಿ, ದಸ್ತಾವೇಜು ಬರಹಗಾರರ ಕಚೇರಿಗಳಿಗೆ ವಿಜಿಲೆನ್ಸ್ ದಾಳಿ ನಡೆಸಿದ್ದು, ಕೆಲವೊಂದು ಲೋಪಗಳನ್ನು ಪತ್ತೆಹಚ್ಚಿದೆ. ಕಾಸರಗೋಡು, ರಾಜಾಪುರಂ, ಮಂಜೇಶ್ವರ ಉಪನೋಂದಾವಣಾಕಚೇರಿಗಳಿಗೆ ವಿಜಿಲೆನ್ಸ್ ಡಿವೈಎಸ್‍ಪಿ ಕೆ.ವಿ ವೇಣುಗೋಪಾಲ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಲಾಗಿದ್ದು, ಭಾರಿ ಲೋಪ ಪತ್ತೆಹಚ್ಚಲಾಗಿದೆ.
ಮನೆಗಳ ಸರ್ಕಾರ ನಿಗದಿತ ಮೌಲ್ಯ ಕಡಿತಗೊಳಿಸಿ ನೋಂದಾವಣೆ ನಡೆಸಿರುವುದರಿಂದ ಸರ್ಕಾರದ ಖಜಾನೆಗೆ ಲಕ್ಷಾಂತರ ರೂ. ಮಷ್ಟವಾಗಿರುವುದನ್ನು ಪತ್ತೆಹಚ್ಚಲಾಗಿದೆ. ನೋಂದಾವಣಾಧಿಕಾರಿ ತಪಾಸಣೆ ನಡೆಸದೆ, ಇಂಜಿನಿಯರ್‍ಗಳು ಹಾಗೂ ದಸ್ತಾವೇಜು ಬರಹಗಾರರನ್ನೊಳಗೊಂಡ ತಂಡ ನಿಗದಿಪಡಿಸುವ ಮೊತ್ತವನ್ನಷ್ಟೆ ವಸೂಲಿ ಮಾಡಲಾಗುತ್ತಿದೆ. ದಸ್ತಾವೇಜು ಬರಹಗಾರರು ನೋಂದಾವಣೆ ಸಂದರ್ಭ ಕೆಲವೊಂದು ರಶೀದಿಗಳನ್ನು ಅಳವಡಿಸದೆ ಲೋಪವೆಸಗುತ್ತಿರುವುದನ್ನೂ ಪತ್ತೆಹಚ್ಚಲಾಗಿದೆ.