ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿರುವ ದೂರದರ್ಶನ ಕೇಂದ್ರದ ಮಹಿಳೆಯರ ವಾಶ್‌ರೂಮ್ ಒಂದರಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದೆ. ಭಾನುವಾರ ಮಹಿಳೆಯೊಬ್ಬರ ಕಣ್ಣಿಗೆ ಈ ಕ್ಯಾಮೆರಾ ಕಂಡಿದೆ.
ಕೇಂದ್ರದ ಅಧಿಕಾರಿಗಳು ಬುಧವಾರ ಪೊಲೀಸರನ್ನು ಸಂಪರ್ಕಿಸಿದ್ದು, ಇದೀಗ ತಿರುವನಂತಪುರಂ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡಲಾಗಿದೆ.
ಆರೋಪಿಯೂ ಸಂಸ್ಥೆಯ ತಾತ್ಕಾಲಿಕ ಉದ್ಯೋಗಿಯಾಗಿದ್ದು, ಆತನೇ ಕ್ಯಾಮೆರಾವನ್ನು ಅಳವಡಿಸಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯ ಸ್ಟುಡಿಯೋ ಬಳಿಯ ವಾಶ್ ರೂಂನಲ್ಲಿ ಕ್ಯಾಮೆರಾ ಇಡಲಾಗಿತ್ತು.
ದೂರದರ್ಶನದ ಉನ್ನತ ಅಧಿಕಾರಿಗಳನ್ನು ಒಳಗೊಂಡ ಮಹಿಳಾ ಸಮಿತಿ ಮತ್ತು ಶಿಸ್ತು ಸಮಿತಿ ಸಹ ಪ್ರಕರಣದ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿದೆ.