ಕುಂಬಳೆ: ಮಹಾಕವಿ ಮೊಯಿನ್ ಕುಟ್ಟಿ ವೈದ್ಯರ್ ಸ್ಮಾರಕ ಅಕಾಡೆಮಿ ನೇತೃತ್ವದಲ್ಲಿ ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಕೇಂದ್ರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ತಾತ್ವಿಕವಾಗಿ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮೊಗ್ರಾಲ್ ನಲ್ಲಿ ಮಾಪಿಳ್ಳ ಕಲಾ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮರು ಸ್ಥಾಪನೆಗೆ ಮೋಯಿನ್‍ಕುಟ್ಟಿ ವೈದ್ಯರ್ ಸ್ಮಾರಕ ಅಕಾಡೆಮಿ ಪದಾಧಿಕಾರಿಗಳು ಭೇಟಿ ನೀಡಿದರು.
ರಾಜ್ಯ ಸಂಸ್ಕøತಿ ಇಲಾಖೆ 2018ರಲ್ಲಿ ಇಂತಹ ನಿರ್ಧಾರ ಕೈಗೊಂಡಿದೆ. ಕೇರಳದ ಮೊದಲ ಉಪ ಕೇಂದ್ರವನ್ನು ನಾದಪುರಂನಲ್ಲಿ ಸ್ಥಾಪಿಸಲಾಯಿತು. ತರುವಾಯ, ಇದು ರಾಜ್ಯದ ಇತರ ನಾಲ್ಕು ಕ್ಷೇತ್ರಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನಂತರದ ಪ್ರಕ್ರಿಯೆಗಳಿಗೆ ಕೋವಿಡ್ ಹರಡುವಿಕೆಯಿಂದ ಅಡಚಣೆಯಾಯಿತು. ಈ ಹಂತಗಳನ್ನು ಈಗ ಪುನರಾರಂಭಿಸಲಾಗಿದೆ.
ಮೊಯಿನ್ ಕುಟ್ಟಿ ವೈದ್ಯರ್ ಸ್ಮಾರಕ ಅಕಾಡೆಮಿಯ ಕಾರ್ಯದರ್ಶಿ ರಝಾಕ್ ಮಾಸ್ತರ್ ಮತ್ತು ಫೈಸಲ್ ಎಲೆಟಿಲ್ ಮೊಗ್ರಾಲ್‍ಗೆ ಭೇಟಿ ನೀಡಿದ್ದು, ಮಂಜೇಶ್ವರ ಕ್ಷೇತ್ರದಲ್ಲಿ ಇಂತಹ ಉಪಕೇಂದ್ರ ಈ ಹಿಂದೆಯೇ ಕಾರ್ಯನಿರ್ವಹಿಸಿದ ಕಾರಣ ತಂಡ ಭೇಟಿ ನೀಡಿದೆ.
ತಾತ್ಕಾಲಿಕ ಕಟ್ಟಡ ಸೌಲಭ್ಯ ದೊರೆತರೆ ಶೀಘ್ರ ಕಾಮಗಾರಿ ಆರಂಭಿಸಬಹುದು ಎಂದು ರಝಾಕ್ ಮಾಸ್ತರ್ ಸ್ಥಳೀಯರಿಗೆ ಮಾಹಿತಿ ನೀಡಿದರು. ಆರಂಭದಲ್ಲಿ 'ಸ್ಕೂಲ್ ಆಫ್ ಮಾಪಿಳ್ಳ ಆಟ್ರ್ಸ್' ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲಾಗುವುದು.
ಮೊಗ್ರಾಲ್ ಮಾಪ್ಪಿಳ ಕಲಾ ಮತ್ತು ಸಂಶೋಧನಾ ಕೇಂದ್ರವನ್ನು ಪುನರ್ ಸ್ಥಾಪಿಸಬೇಕು ಎಂಬುದು ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿದೆ. ಸಭೆಯಲ್ಲಿ ಬಶೀರ್ ಅಹ್ಮದ್ ಸಿದ್ದೀಕ್, ಸಿದ್ದೀಕಲಿ ಮೊಗ್ರಾಲ್, ಎ.ಎಸ್.ಮುಹಮ್ಮದ್ ಕುಂಞÂ್ಞ, ಅಬು ತ್ವಾಹಿ, ಸೈಯದ್ ಹಾದಿ ತಂಙಳ್ ಮೊಗ್ರಾಲ್, ಕೆ.ಎಂ.ಮುಹಮ್ಮದ್, ಸಿದ್ದೀಕ್ ರಹ್ಮಾನ್, ತಾಜುದ್ದೀನ್, ಹಮೀದ್ ಕಾವಿಲ್, ಲತೀಫ್ ಕುಂಬಳೆ, ಶಿಹಾಬ್ ಮಾಸ್ತರ್ ಉಪಸ್ಥಿತರಿದ್ದರು. ಕೆ.ವಿ.ಅಶ್ರಫ್ ಸ್ವಾಗತಿಸಿ, ವಂದಿಸಿದರು.
ಈ ಸಂದರ್ಭ 15 ಸದಸ್ಯರ ತಾತ್ಕಾಲಿಕ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಬಶೀರ್ ಅಹ್ಮದ್ ಸಿದ್ದಿಕ್ ಮತ್ತು ಸಂಚಾಲಕರಾಗಿ ಕೆ.ಎಂ.ಮೊಹಮ್ಮದ್ ಕಾರ್ಯದರ್ಶಿಯಾಗಿ ಆಯ್ಕೆಯಾದರು.