ಕಾಸರಗೋಡು: ಚಿನ್ಮಯ ಮಿಷನ್ ನೇತೃತ್ವದಲ್ಲಿ ಶ್ರೀ ಶಂಕರಾಚಾರ್ಯ ವಿರಚಿತ, ಶಿವ ಶಕ್ತಿ ಸ್ವರೂಪಿಣಿ ಮಹಾದೇವಿಯ ಮಂತ್ರ ಸಮಾನವಾದ ಶ್ಲೋಕಗಳಿಂದ ಕೂಡಿದ " ಸೌಂದರ್ಯ ಲಹರಿ" ಸ್ತೋತ್ರ ಪಾರಾಯಣ ಮಹಾ ಯಜ್ಞವು ಕಾಸರಗೋಡು ಚಿನ್ಮಯ ಕ್ಯಾಂಪಸ್‍ನಲ್ಲಿ ಶುಕ್ರವಾರ ಜರುಗಿತು.
ಜಾಗತಿಕ ಮಟ್ಟದಲ್ಲಿ ನಡೆಸಲಾದ ಸೌಂದರ್ಯ ಲಹರಿ ಉಪಾಸನಾ ಯಜ್ಞದ ಮುಖ್ಯ ಪೌರೋಹಿತ್ಯವನ್ನು ಶೃಂಗೇರಿ ಮಠದ ಅಧೀನದಲ್ಲಿರುವ ಮೈಸೂರು ಸಂಸ್ಥಾನದ ಉಪ ಮಠವಾದ ಯಾದತ್ತೂರು ಮಠಾಧಿಪತಿ ಶ್ರೀ ಶಂಕರ ಭಾರತೀ ಸ್ವಾಮಿ ನಿರ್ವಹಿಸಿದರು.
ಕಾಸರಗೋಡು ಚಿನ್ಮಯ ಕ್ಯಾಂಪಸ್ಸಿನಲ್ಲಿ ಸಂಘಟಿಸಲಾಗಿದ್ದ ಸೌಂದರ್ಯ ಲಹರಿ ಉಪಾಸನೆಯಲ್ಲಿ ವಿದ್ಯಾಲಯ ಪ್ರಾಂಶುಪಾಲೆಪದ್ಮಾವತಿ, ನಿರ್ದೇಶಕ ಬಿ. ಪುಷ್ಪರಾಜ್ ಚಿನ್ಮಯ ಮಿಷನ್ ಆಡಳಿತ ಮಂಡಳಿ ಪದಾಧಿಕಾರಿಗಳು, ಅಧ್ಯಾಪಕರು, ಬೀಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು .