ಮಂಜೇಶ್ವರ: ಶ್ರೀ ಮಂತ್ರದೇವತೆ ಸನ್ನಿಧಿ ಮೊರತ್ತಣೆ ಅರ್ಪಿಸುವ ಗಂಗು ಮೊರತ್ತಣೆ ಇವರ ಕತೆ ಹಾಗೂ ನಿರ್ಮಾಣದಲ್ಲಿ ಸೋಮನಾಥ ಶೆಟ್ಟಿ ಮಂಗಲ್ಪಾಡಿ ಇವರ ನಿರ್ದೇಶನದಲ್ಲಿ ಮೂಡಿ ಬಂದ ತುಳು ಕಿರು ಚಿತ್ರ ಛೇ....! ಇದರ ಬಿಡುಗಡೆ ಸಮಾರಂಭವು ಮೊರತ್ತಣೆಯ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ಬಿನ ಪರಿಸರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿಯವರು ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಪ್ರಬುದ್ಧ ಹಾಗೂ ಪ್ರತಿಭಾನ್ವಿತ ಉದಯೋನ್ಮುಖ ಕಲಾವಿದರ ಸಂಗಮದಲ್ಲಿ ನಿರ್ಮಾಣವಾದ ಕಿರುಚಿತ್ರವಾದರೂ ಸಮಾಜಕ್ಕೆ ಸಂದೇಶ ಸಾರುವಲ್ಲಿ ಹಿರಿಮೆಯನ್ನು ಗಳಿಸಲಿ ಎಂದು ಆನುಗ್ರಹ ನುಡಿಗಳನ್ನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವರ್ಕಾಡಿ ಪಂಚಾಯತ್ ಸದಸ್ಯರಾದ ರಾಜ್ ಕುಮಾರ್ ಮುಟ್ಲರವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ರಾಜ ಬೆಳ್ಚಪ್ಪಾಡ ಉದ್ಯಾವರ ಮಾಡ, ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದರಾದ ಸುಂದರ್ ರೈ ಮಂದಾರ,ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿಗಾರ್ ಕೋಡಪದವು, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಒ.ಐ,ಪತ್ರಕರ್ತ ಜಯ ಮಣಿಯಂಪಾರೆ, ಶಿವಶಕ್ತಿ ಫ್ರೆಂಡ್ಸ್ ಕ್ಲಬ್ಬಿನ ಗೌರವಾಧ್ಯಕ್ಷ ಕೃಷ್ಣ ಮೇಸ್ತ್ರಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಮನ್ವಿತಾ,ತನ್ವಿ ಪ್ರಾರ್ಥನೆ ಹಾಡಿದರು. ರಾಜೇಶ್ ಮದಕ ಸ್ವಾಗತಿಸಿ ದಿವಾಕರ್ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು.
ಕಿರುಚಿತ್ರ ತಂಡ : ಚಲನಚಿತ್ರ ,ರಂಗನಟ ಪುಷ್ಪರಾಜ್ ಬೊಳ್ಳಾರ್ , ಸುರೇಶ್ ವಿಟ್ಲ.,ಸೋಮನಾಥ ಶೆಟ್ಟಿ ಮಂಗಲ್ಪಾಡಿ ಜತೆ ಕಿರು ಚಿತ್ರದ ನಾಯಕಿ ನಟಿಯಾಗಿ ಮಾಲಾಶ್ರೀ ಶೆಟ್ಟಿ ಪಡಾರ್ ನಾಯಕ ನಟನಾಗಿ ಸ್ವರಾಜ್ ಅರಿಬೈಲು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಪ್ರದೀಫ್ ಕುಮಾರ್,ಕೀರ್ತನ್ ಮೊರತ್ತಣೆ,ಬ್ರಿಜೇಶ್,ಚರಣ್,ಪ್ರಕಾಶ್,ಅಶೋಕ್ ಬಟ್ಟಿಪದವು,ಬಾಬು ನಾಯ್ಕ್ ,ಪುಟಾಣಿಗಳಾದ ತನ್ವಿ,ಮನ್ವಿ ಅರಿಂಗುಲ ನಟಿಸಿದ್ದಾರೆ.
ಗಂಗು ಮೊರತ್ತಣೆ "ಛೇ" ಕಿರು ಚಿತ್ರದ ಕತೆ ಹಾಗೂ ನಿರ್ಮಾಣ ಮಾಡಿದ್ದು ಸಾಹಿತ್ಯ , ಸಂಭಾಷಣೆ , ಹಿನ್ನೆಲೆಗಾಯನ , ನಿರ್ದೇಶನವನ್ನು ಸೋಮಾನಾಥ ಶೆಟ್ಟಿ ಮಂಗಲ್ಪಾಡಿ ಮಾಡಿದ್ದಾರೆ. ರಾಜು ಬಿ.ಕೆ ಅವರ ಛಾಯಾಗ್ರಹಣ ಹಾಗೂ ವಿನೋದ್ ಬಂದ್ಯೋಡು ಸಹ ಛಾಯಾಗ್ರಹಣದಲ್ಲಿ ದೀಪಕ್ ಹೇರೂರು ಅವರು ಸಹಕರಿಸಿದ್ದಾರೆ. ಪ್ರವೀಣ್ ಅರ್ಚಾರ್ ಸಂಕಲನದಲ್ಲಿ ಮೂಡಿ ಬಂದ ಕಿರುಚಿತ್ರಕ್ಕೆ ಗೋಕುಲ್ ಕೃಷ್ಣ ಕಲರಿಂಗ್ ನಡೆಸಿದ್ದು ಹಿನ್ನೆಲೆ ಸಂಗೀತ ಹಾಗೂ ಸ್ವರ ಮುದ್ರಣದಲ್ಲಿ ನಾಗಾರ್ಜುನ್ ಮಂಗಲ್ಪಾಡಿ ತಮ್ಮ ಕೈಚಳಕವನ್ನು ಮೆರೆದಿದ್ದಾರೆ.ಚಿತ್ರದ ಹಾಡಿನ ಸಂಗೀತ ಸಂಯೋಜನೆಯನ್ನು ಲವ ಕುಮಾರ್ ಐಲ ನಡೆಸಿದ್ದು ಒಟ್ಟಾರೆ ಕಿರು ಚಿತ್ರವು ಸಾಮಾಜಿಕ ಸಂದೇಶಗಳೊಂದಿಗೆ ವಿಭಿನ್ನ ರೀತಿಯಲ್ಲಿ ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ.