ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಭಾರತ ನೀಡಿದ್ದ 284 ರನ್‌ಗಳ ಗೆಲುವಿನ ಗುರಿಯನ್ನ ಬೆನ್ನತ್ತಿರುವ ಕಿವೀಸ್ ಪಡೆ ಅಂತಿಮ ದಿನದಾಟದಲ್ಲಿ 9 ವಿಕೆಟ್ ಕಳೆದುಕೊಂಡು ಸೋಲಿನ ಅಂತಿಮ ಹಂತಕ್ಕೆ ಬಂದು ತಲುಪಿತ್ತು. ಆದ್ರೆ ಯುವ ಆಟಗಾರ ರಚಿನ್ ರವೀಂದ್ರ ತಂಡವನ್ನ ಸೋಲಿನಿಂದ ಕಾಪಾಡಿದ್ದು, ಕಿವೀಸ್ ಪಡೆ ಒಂದು ವಿಕೆಟ್ ಉಳಿಸಿಕೊಂಡು ಡ್ರಾನಲ್ಲಿ ಅಂತ್ಯಗೊಂಡಿತು. ನಾಲ್ಕನೇ ದಿನದಾಟದಲ್ಲಿ 1 ವಿಕೆಟ್ ನಷ್ಟಕ್ಕೆ 4ರನ್ ಕಲೆಹಾಕಿದ್ದ ನ್ಯೂಜಿಲೆಂಡ್ ಪರ ಟಾಮ್ ಲಥಾಮ್ ಮತ್ತು ನೈಟ್‌ವಾಚ್‌ಮನ್ ಆಗಿ ಕಣಕ್ಕಿಳಿದಿದ್ದ ಸೋಮರ್ವಿಲ್ಲೆ ಟೀಮ್ ಇಂಡಿಯಾ ಬೌಲರ್‌ಗಳನ್ನ ತುಂಬಾ ಕಾಡಿದ್ರು. ಹೀಗಾಗಿಯೇ ಅಂತಿಮ ದಿನದ ಮೊದಲ ಸೆಷನ್‌ನಲ್ಲಿ ಭಾರತಕ್ಕೆ ಒಂದೂ ವಿಕೆಟ್ ಲಭಿಸಲಿಲ್ಲ.
ಊಟದ ವಿರಾಮದ ಬಳಿಕ ಮೊದಲ ಎಸೆತದಲ್ಲೇ ವಿಕೆಟ್ ಹೌದು, ಊಟದ ವಿರಾಮದ ಬಳಿಕ ಮೊದಲ ಎಸೆತದಲ್ಲೇ ಭಾರತದ ವೇಗಿ ಉಮೇಶ್ ಯಾದವ್ ಯೋಜಿಸಿದಂತೆ ಸೋಮರ್ವಿಲ್ಲೆಯನ್ನ ಔಟ್ ಮಾಡೋದ್ರಲ್ಲಿ ಭಾರತ ಯಶಸ್ವಿಯಾಯ್ತು. 36 ರನ್‌ಗಳಿಸಿ ಟೀಮ್ ಇಂಡಿಯಾಗೆ ತಲೆನೋವಾಗಿದ್ದ ಸೋಮರ್ವಿಲ್ಲೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟರು.
LBW ಬಲೆಗೆ ಬಿದ್ದ ವಿಲಿಯಮ್ಸನ್ ಕಿವೀಸ್ ತಂಡ ನಾಯಕ ಕೇನ್ ವಿಲಿಯಮ್ಸನ್ ಮೇಲೆ ಸಾಕಷ್ಟು ಅವಲಂಬಿತವಾಗಿತ್ತು. ಆದ್ರೆ 24 ರನ್‌ಗಳಿಸಿದ್ದ ವಿಲಿಯಮ್ಸನ್‌ರನ್ನ ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದ್ರು. ಇದಕ್ಕೂ ಮೊದಲು ಹೆನ್ರಿ ನಿಕೋಲ್ಸ್ ಬಂದಷ್ಟೇ ವೇಗವಾಗಿ ಕೇವಲ ಒಂದು ರನ್‌ಗೆ ಅಕ್ಷರ್ ಪಟೇಲ್ ಸ್ಪಿನ್ ದಾಳಿಗೆ ವಿಕೆಟ್ ಒಪ್ಪಿಸಿದ್ರು.
ಕಿವೀಸ್ ತಂಡವನ್ನ ಕಾಪಾಡಿದ ರಚಿನ್ ರವೀಂದ್ರ ಇನ್ನು ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಕೈಲ್ ಜೇಮಿಸನ್, ಟಿಮ್ ಸೌಥಿಯನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಜಡ್ಡು ಯಶಸ್ವಿಯಾದ್ರು. ಆದ್ರೆ ದಿನದಾಟದ ಕೊನೆಯಲ್ಲಿ ಅಂತಿಮ ವಿಕೆಟ್ ಪಡೆಯಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ರಚಿನ್ ರವೀಂದ್ರ ಅಜೇಯ 18 ರನ್‌ಗಳಿಸಿ ಕಿವೀಸ್ ತಂಡವನ್ನ ಸೋಲಿನಿಂದ ಪಾರು ಮಾಡಿದ್ರು. 91 ಎಸೆತಗಳಲ್ಲಿ ಸಾಕಷ್ಟು ತಾಳ್ಮೆಯ ಆಟ ಪ್ರದರ್ಶಿಸಿದ ರಚಿನ್ 18ರನ್‌ಗಳೊಂದಿಗೆ ನ್ಯೂಜಿಲೆಂಡ್ ತಂಡವನ್ನ ಸೋಲಿನಿಂದ ಕಾಪಾಡಿದ್ರು. ಈ ಮೂಲಕ ಪಂದ್ಯವು ಯಾವುದೇ ಫಲಿತಾಂಶ ಕಾಣದೆ ಡ್ರಾನಲ್ಲಿ ಅಂತ್ಯಗೊಂಡಿತು. ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್, ರವಿಚಂದ್ರನ್ ಅಶ್ವಿನ್ 3 ವಿಕೆಟ್, ಅಕ್ಷರ್ ಪಟೇಲ್, ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದು ಮಿಂಚಿದ್ರು.
ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಶ್ರೇಯಸ್ ಅಯ್ಯರ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಮತ್ತು ಅರ್ಧಶತಕ ದಾಖಲಿಸಿ ಟೀಂ ಇಂಡಿಯಾಗೆ ಆಧಾರವಾದ ಶ್ರೇಯಸ್ ಅಯ್ಯರ್ ಮೊದಲ ಟೆಸ್ಟ್ ಪಂದ್ಯದಲ್ಲೇ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನ ಪಡೆದು ಮಿಂಚಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಚೊಚ್ಚಲ ಪಂದ್ಯದಲ್ಲಿ ಶತಕ ಹಾಗೂ ಅರ್ಧ ಶತಕದ ಸಾಧನೆಯನ್ನು ಈವರೆಗೆ ಭಾರತದ ಯಾವ ಬ್ಯಾಟ್ಸ್‌ಮನ್ ಕೂಡ ದಾಖಲಿಸಿರಲಿಲ್ಲ. ಶ್ರೇಯಸ್ ಐಯ್ಯರ್ ಈ ಸಾಧನೆ ಮಾಡಿ ಭಾರತದ ಪರವಾಗಿ ಹೊಸ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ ಈ ಸಾಧನೆ ಮಾಡಿದ 16ನೇ ಕ್ರಿಕೆಟಿಗ ಎನಿಸಿದ್ದಾರೆ. ಇದರ ಜೊತೆಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದು ಹೊಸ ದಾಖಲೆ ಬರೆದಿದ್ದಾರೆ.