ಕಾಸರಗೋಡು: ಕ್ಯಾಟರಿಂಗ್ ಸರ್ವೀಸ್ ಸಂಬಂಧ ಆಹಾರ ಸುರಕ್ಷಾ ಇಲಾಖೆ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆಹಾರ ಸುರಕ್ಷಾ ಕಾಯ್ದೆ-2006 ರೂಲ್ಸ್ ಆಂಡ್ ರೆಗ್ಯುಲೇಷನ್ 2011ರ ಪ್ರಕಾರ ಕ್ಯಾಟರಿಂಗ್ ಸರ್ವೀಸ್ ಗಳಿಗೆ ಎಫ್.ಎಸ್.ಎಸ್.ಎ.ಐ. ಪರವಾನಗಿ ಕಡ್ಡಾಯಗೊಳಿಸಲಾಗಿದೆ. ಕೆಲವು ಕ್ಯಾಟರಿಂಗ್ ಸರ್ವೀಸ್ ಸಂಸ್ಥೆಗಳು ಎಫ್.ಎಸ್.ಎಸ್.ಎ.ಐ. ನೋಂದಣಿ ಮಾತ್ರ ಪಡೆದು ಚಟುವಟಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಕಾನೂನುಬಾಹಿರವಾದುದು. ಕ್ಯಾಟರಿಂಗ್ ಸಂಸ್ಥೆಗಳು ಪರವಾನಗಿ ಪಡೆದಿದ್ದು, ಆಹಾರ ಪದಾರ್ಥಗಳನ್ನು ಸೂಕ್ತರೀತಿಯ ವಿಧಾನದಲ್ಲಿ ಸುರಕ್ಷಿತವಾಗಿ ಇರಿಸಬೇಕು. ಶೀತಲೀಕರಿಸಿದ ಆಹಾರವನ್ನು 5 ಡಿಗ್ರಿ ಸೆಲ್ಶಿಯಸ್ ಗಿಂತ ಕಡಿಮೆ, ಬಿಸಿ ಆಹಾರವನ್ನು 60 ಡಿಗ್ರಿ ಸೆಲ್ಶಿಯಸ್ ಗಿಂತ ಅಧಿಕ ಪ್ರಮಾಣದಲ್ಲಿ ಸಂರಕ್ಷಿಸಿಡಬೇಕು.
ಕ್ಯಾಟರಿಂಗ್ ಸಂಸ್ಥೆಗಳಿಂದ ವಿತರಣೆ ನಡೆಸಲಾಗುವ ಆಹಾರದ ಮಾದರಿಯನ್ನು ಕಡ್ಡಾಯವಾಗಿ 2 ದಿನಗಳ ಕಾಳ ಕೆಡದಂತೆ ಇರಿಸಿ, ತಪಾಸಣೆ ಅಗತ್ಯವಾದಲ್ಲಿ ಹಾಜರುಪಡಿಸಬೇಕು.
ಕ್ಯಾಟರಿಂಗ್ ಸಂಸ್ಥೆಯ ಕನಿಷ್ಠ ಒಬ್ಬ ಮೇಲ್ವಿಚಾರಕ ಎಫ್.ಎಸ್.ಎಸ್.ಎ.ಐಯ ಫೆÇೀಸ್ಟಾಕ್ ತರಬೇತಿ ಪಡೆದಿರಬೇಕು. ತರಬೇತಿ ಪಡೆದ ವ್ಯಕ್ತಿ ಸಂಸ್ಥೆಯ ಇತರ ಸಿಬ್ಬಂದಿಗೆ ತರಬೇತಿ ಒದಗಿಸಬೇಕು. ತರಬೇತಿ ಸಂಬಂದ ಸಂಶಯಗಳಿದ್ದಲ್ಲಿ ಆಹಾರ ಸುರಕ್ಷಾ ಸಹಾಯಕ ಆಯುಕ್ತರು ಅಥವಾ ಆಹಾರ ಸುರಕ್ಷಾ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಕ್ಯಾಟರಿಂಗ್ ಸರ್ವೀಸ್‍ಗಾಗಿ ಆರ್ಡರ್ ನೀಡುವ ಗ್ರಾಹಕರು, ಸಂಸ್ಥೆಗಳು(ಕ್ಯಾಟರಿಂಗ್ ಏಜೆನ್ಸಿಗಳು, ಹೋಟೆಲ್ ಗಳು, ರೆಸ್ಟಾರೆಂಟ್) ಆಹಾರ ಸುರಕ್ಷಾ ಪರವಾನಗಿ ಹೊಂದಿ ಚಟುವಟಿಕೆ ನಡೆಸುತ್ತಿರುವುದನ್ನು ಖಚಿತಪಿಸಿಕೊಳ್ಳಬೇಕಾಗಿದೆ.
ಕ್ಯಾಟರಿಂಗ್ ಸಂಸ್ಥೆಗಳ, ಹೋಟೆಲ್ ಗಳ ಸಂಬಂಧ ದೂರುಗಳು ಲಭಿಸುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷಾ ಇಲಾಖೆ ತಪಾಸಣೆಗಳನ್ನು ಚುರುಕುಗೊಳಿಸಿ, ಕಾನೂನು ಉಲ್ಲಂಘನೆ ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಿರುವುದಾಗಿ ಇಲಾಖೆ ಆಯುಕ್ತರು ತಿಳಿಸಿದ್ದಾರೆ.