ಕಾಸರಗೋಡು: ಜಿಲ್ಲಾ ಟ್ಯೂರಿಸಂ ಪ್ರಮೋಷನ್ ಕೌನ್ಸಿಲ್ ವತಿಯಿಂದ ನಿರ್ಮಿಸಲಾದ ಲಿಟಲ್ ಇಂಡಿಯಾ ಕಿರು ವೀಡಿಯೋ ಬಿಡುಗಡೆಗೊಂಡಿದೆ.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ವೀಡಿಯೋ ಬಿಡುಗಡೆಗೊಳಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ಥಾಮಸ್ ಆಂಟನಿ, ಬಿ.ಆರ್.ಡಿ.ಸಿ. ಪ್ರಬಂಧಕ ಯು.ಎಸ್.ಪ್ರಸಾದ್, ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್ ಮೊದಲಾದವರು ಉಪಸ್ಥಿತರಿದ್ದರು.
ರಾಣಿಪುರಂ, ಬೆಳ್ಳೂರು ಪಂಚಾಯತ್ ನ ಕಲ್ಲೇರಿಮೂಲೆ ಜಲಪಾತ, ವಲಿಯಪರಂಬ ಹಿನ್ನೀರು, ಪಿಲಿಕೋಡು ಬಯಲು ಇತ್ಯಾದಿಗಳ ಕುರಿತಾದ ಕಿರು ವೀಡಿಯೋಗಳು ಇಲ್ಲಿವೆ.