ಕಾಸರಗೋಡು: ಜೈವಿಕ ವೈವಿಧ್ಯ ಸಂರಕ್ಷಣೆ ನಡೆಸಲು ಕಾಸರಗೋಡು ಜಿಲ್ಲೆಯ ಜೈವಿಕ ಪೆÇೀಷಣೆ ಸಮಿತಿಗಳು ರಂಗಕ್ಕಿಳಿದಿರುವ ವೇಳೆ ಜೈವಿಕ ವೈವಿಧ್ಯ ಮಂಡಳಿಯ ಅತ್ಯುತ್ತಮ ಜೈವಿಕ ಪೆÇೀಷಣೆ ಸಮಿತಿಗಳ ರಾಜ್ಯ ಮಟ್ಟದ ಪ್ರಶಸ್ತಿಗಳು ಜಿಲ್ಲೆಗೆ ಲಭಿಸಿರುವುದು ಹೆಚ್ಚುವರಿ ಹೊಳಪು ನೀಡಿದೆ.
ಮೊದಲ ಸ್ಥಾನ ಪಿಲಿಕೋಡ್ ಗ್ರಾಮ ಪಂಚಾಯತ್ ನ ಮಾತೃಕಾ ಜೈವಿಕ ಪೆÇೀಷಣೆ ಸಮಿತಿಗೆ ಮತ್ತು ಮೂರನೇ ಸ್ಥಾನ ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ನ ಜೈವಿಕ ಪೆÇೀಷಣೆ ಸಮಿತಿಗೆ ಲಭಿಸಿವೆ. ಕಣ್ಣೂರು ಜಿಲ್ಲೆಯ ಕೂರುಮಾಞರು ಗ್ರಾಮ ಪಂಚಾಯತ್ ಪಿಲಿಕೋಡಗಗ ಗ್ರಾಮ ಪಂಚಾಯತ್ನ ಮಾತೃಕಾ ಜೈವಿಕ ಪೆÇೀಷಣೆಯೊಂದಿಗೆ ಮೊದಲ ಪ್ರಶಸ್ತಿಯನ್ನು ಹಂಚಿಕೊಂಡಿದೆ.
ತಿರುವನಂತಪುರಂ ಅಯ್ಯಂಗಾಳಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಸ್ತಿ ಪ್ರದಾನ ಮಾಡಿದರು. ಪಿಲಿಕೋಡ್ ಪಂಚಾಯತ್ ನಿಂದ ಉಪಾಧ್ಯಕ್ಷ ಎ.ಕೃಷ್ಣನ್, ಬಿ.ಎಂ.ಸಿ. ಸಂಚಾಲಕ ಎಂ.ವಿನಯನ್ ಪ್ರಶಸ್ತಿ ಸ್ವೀಕಾರ ಮಾಡಿದರು. ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ನಿಂದ ಅಧ್ಯಕ್ಷ ಟಿ.ಕೆ.ರವಿ ಪ್ರಶಸ್ತಿ ಪಡೆದುಕೊಂಡರು.
ಪ್ರಥಮ ಸ್ಥಾನಕ್ಕೆ ಒಂದು ಲಕ್ಷ ರೂ., ತೃತೀಯ ಸ್ಥಾನಕ್ಕೆ 25 ಸಾವಿರ ರೂ. ನಗದು ಬಹುಮಾನಗಳಿವೆ. ಸ್ಥಳೀಯಾಡಳಿತ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು.
ಪಿಲಿಕೋಡ್
ವಿಭಿನ್ನ ಜನಕಲ್ಯಾಣ ಮಾದರಿಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಜನಮನ ಸೆಳೆದಿರುವ ಪಿಲಿಕೋಡ್ ಗ್ರಾಮ ಪಂಚಾಯತ್ ನ ಜೈವಿಕ ವೈವಿಧ್ಯ ಚಟುವಟಿಕೆಗಳಿಗೆ ಈ ಪ್ರಶಸ್ತಿ ಲಭಿಸಿರುವುದು ಉನ್ನತ ಅಂಗೀಕಾರವಾಗಿದೆ. ನಾಡಿನಲ್ಲಿ ಹಸುರೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಪೈತೃಕಂ ನಾಟ್ ಮಾವ್ ಯೋಜನೆ, ಪೈತೃಕಂ ಬೀಜ ಉತ್ಸವಂ, ವಿದ್ಯಾಲಯಗಳಲ್ಲಿ ಜಾರಿಗೊಳಿಸಲಾದ ಜೈವಿಕತಾಳಂ ಯೋಜನೆಸಹಿತ ಚಟುವಟಿಕೆಗಳು ಗಮನಾರ್ಹವಾಗಿವೆ.
ಕರಿಂದಳಂ
ಕಿನಾನೂರು-ಕರಿಂದಳಂ ಗ್ರಾಮಪಂಚಾಯತ್ ನ ಜೈವಿಕ ವೈವಿಧ್ಯದ ಪುನರಾವರ್ತನೆಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಹಳ್ಳಗಳು, ಕೆರೆಗಳು ಇತ್ಯಾದಿಗಳ ಪುನಶ್ಚೇತನ, ಈ ನಿಟ್ಟಿನಲ್ಲಿ ಜನಪರ ಸಮಿತಿಗಳನ್ನು ರಚಿಸಿ, ಅನೇಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಬನಗಳ ಸಂರಕ್ಷಣೆ ನಿಟ್ಟಿನಲ್ಲಿ ಶಾಲಾ ಮಟ್ಟದ ಜೈವಿಕ ಕ್ಲಬ್ ಗಳ ಸೇವೆ ಬಳಸಲಾಗಿತ್ತು. ತಲಯಡ್ಕ ಉತ್ಖನನ ಜಾಗವನ್ನು ತ್ಯಾಜ್ಯರಹಿತವಾಗಿಸಿ ಪ್ರಾಕೃತಿಕ ರೀತಿಯ ಜಲಸಂರಕ್ಷಣೆ ನಡೆಸಲಾಗಿತ್ತು. ಬಳಕೆಯಿಲ್ಲದ ಕರ್ಗಲ್ಲಕೋರೆ ಗಳಲ್ಲಿ ಮೀನುಕೃಷಿ, ಕಯರ್ ಡೀ ಫೈಬರಿಂಗ್ ಯೂನಿಟ್ ಆರಂಭಿಸಲಾಗಿದೆ. ಪಂಚಾಯತ್ ನ 15 ಎಕ್ರೆ ಬಂಜರು ಜಾಗದಲ್ಲಿ ಸ್ಥಳಿಯ ತಳಿಯ ಭತ್ತದ ಕೃಷಿ ನಡೆಸಿ"ಕೆ.ಕೆ.ರೈಸ್" ಎಂಬ ಹೆಸರಿನಲ್ಲಿ ಬ್ರಾಂಡ್ ನಡೆಸಿ ಮಾರುಕಟ್ಟೆಗೆ ತರಲಾಗಿದೆ.