ನವದೆಹಲಿ: ರಸ್ತೆಗಳ ಹಾನಿಯಿಂದ ಸಂಭವಿಸುವ ಅಪಘಾತಗಳನ್ನು ಕಡಿಮೆ ಮಾಡಲು ರಸ್ತೆಯಲ್ಲಿನ ಗುಂಡಿ, ಬಿರುಕುಗಳನ್ನು ಗುರುತಿಸುವ ಸ್ಮಾರ್ಟ್‌ಫೋನ್ ಆಧರಿತ ತಂತ್ರಜ್ಞಾನ ಅಭಿವೃದ್ಧಿಗೆ ಭಾರತ ಮತ್ತು ಜಪಾನ್ ಜಂಟಿಯಾಗಿ ಸಂಶೋಧನೆ ನಡೆಸಲಾರಂಭಿಸಿವೆ.
ನವದೆಹಲಿ: ರಸ್ತೆಗಳ ಹಾನಿಯಿಂದ ಸಂಭವಿಸುವ ಅಪಘಾತಗಳನ್ನು ಕಡಿಮೆ ಮಾಡಲು ರಸ್ತೆಯಲ್ಲಿನ ಗುಂಡಿ, ಬಿರುಕುಗಳನ್ನು ಗುರುತಿಸುವ ಸ್ಮಾರ್ಟ್‌ಫೋನ್ ಆಧರಿತ ತಂತ್ರಜ್ಞಾನ ಅಭಿವೃದ್ಧಿಗೆ ಭಾರತ ಮತ್ತು ಜಪಾನ್ ಜಂಟಿಯಾಗಿ ಸಂಶೋಧನೆ ನಡೆಸಲಾರಂಭಿಸಿವೆ.
ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ಟೋಕಿಯೊ ವಿಶ್ವವಿದ್ಯಾಲಯ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ. ರಸ್ತೆ ಪರಿಸ್ಥಿತಿಗಳ ಮೇಲ್ವಿಚಾರಣೆ ಸ್ವಯಂಚಾಲಿತಗೊಳಿಸಿ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
ಯುರೋಪ್‌ನ ಲಕ್ಸೆಂಬರ್ಗ್‌ನ ದತ್ತಾಂಶ ವಿಜ್ಞಾನಿ ಅಲೆಕ್ಸಾಂಡರ್ ಮ್ರಾಜ್ ಅವರು ಯೋಜನೆಗೆ ಸಹಕಾರ ನೀಡುತ್ತಿದ್ದಾರೆ.
ಜಗತ್ತಿನಾದ್ಯಂತ ಜನರು ಮತ್ತು ಸರಕುಗಳಿಗೆ ಪ್ರಮುಖ ಸಾರಿಗೆ ಸೇವೆ ಒದಗಿಸಲು ರಸ್ತೆಗಳ ಮೂಲಸೌಕರ್ಯವು ಸಾಮಾಜಿಕ-ಆರ್ಥಿಕ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಸಂಶೋಧನೆ ನಡೆಸುತ್ತಿರುವ ಭಾರತೀಯ ತಂಡದ ಉಸ್ತುವಾರಿ ಐಐಟಿಯ ಪ್ರೊಫೆಸರ್ ದುರ್ಗಾ ತೋಶ್ನಿವಾಲ್ ಹೇಳಿದರು.
ಸಂಶೋಧನಾ ತಂಡವು ಇದುವರೆಗೆ ಬಿರುಕು ಮತ್ತು ಹಾನಿಗೊಳಗಾಗಿರುವ ಸುಮಾರು 31 ಸಾವಿರ ರಸ್ತೆಗಳನ್ನು ಗುರುತಿಸಿದೆ. ಭಾರತದ ಜತಗೆ ಜಪಾನ್ ಮತ್ತು ಜೆಕ್ ಗಣರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.