HEALTH TIPS

ಕೆ-ರೈಲು ಯೋಜನೆ ಅಪ್ರಾಯೋಗಿಕ; ಜಾರಿಯಾದರೆ ಕೆ-ರೈಲು ಕೇರಳವನ್ನು ವಿಭಜಿಸುವ ಚೀನಾದ ಗೋಡೆಯಾಗಲಿದೆ; ಮೆಟ್ರೋಮ್ಯಾನ್

                                             

                   ತಿರುವನಂತಪುರ: ಪಿಣರಾಯಿ ಸರ್ಕಾರದ ಕೆ-ರೈಲ್ ಯೋಜನೆಯನ್ನು ಮೆಟ್ರೋಮ್ಯಾನ್ ಇ ಶ್ರೀಧರನ್ ಟೀಕಿಸಿದ್ದಾರೆ. ಯೋಜನೆ ಜಾರಿಯಾದರೆ ಕೆ-ರೈಲು ಕೇರಳವನ್ನು ವಿಭಜಿಸುವ ಚೀನಾ ಗೋಡೆಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಯೋಜನೆಯ ಪ್ರಸ್ತುತ ಜೋಡಣೆಯನ್ನು ಅವರು ಟೀಕಿಸಿದರು.

                   ಈ ಯೋಜನೆ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಶ್ರೀಧರನ್ ಹೇಳಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿರುವ ಅವರು, ಸರ್ಕಾರ ಘೋಷಿಸಿದಂತೆ 2025ರ ವೇಳೆಗೆ ಯೋಜನೆ ಪೂರ್ಣಗೊಳಿಸಲು ಸಾಧ್ಯವಿಲ್ಲ, ರಾತ್ರಿ ವೇಳೆ ಸರಕು ಸಾಗಣೆ ಮಾಡಲು ಕೆ-ರೈಲ್ ಬಳಸಲಾಗುವುದೆಂದು ಘೋಷಿಸಿರುವುದು ಪ್ರಯೋಜನವಿಲ್ಲದ ವಿಚಾರವಾಗಿದೆ. 

                    ತಿರುವನಂತಪುರಂ-ಕೋಝಿಕೋಡ್ ಲೈಟ್ ಮೆಟ್ರೊ ನಿರ್ಮಾಣದ ಬಗ್ಗೆ ಸರ್ಕಾರದ ಆಸಕ್ತಿಯ ಕೊರತೆಯನ್ನೂ ಅವರು ಟೀಕಿಸಿದರು. ಲೈಟ್ ಮೆಟ್ರೋ ಯೋಜನೆಗಳನ್ನು ಯಾರು ಸ್ಥಗಿತಗೊಳಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದ ಅವರು, ನಿರ್ಮಾಣದ ಸಮಯದಲ್ಲಿ ಯೋಜನೆ ಪ್ರಾರಂಭವಾಗಿದ್ದರೆ, ಇಂದು ಕೇರಳದ ಈ ಎರಡು ನಗರಗಳ ಮೂಲಕ ಲೈಟ್ ಮೆಟ್ರೋ ಸೇವೆ ಪ್ರಾರಂಭವಾಗುತ್ತಿತ್ತು ಎಂದಿರುವರು.

                 11 ಜಿಲ್ಲೆಗಳಲ್ಲಿ 1221 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೆ-ರೈಲ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೇರಳಕ್ಕೆ ಮಾರಕವಾದ  ಯೋಜನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಕಿವಿಗೊಡುತ್ತಿಲ್ಲ.

                   ಕೆ-ರೈಲ್ ರಾಜ್ಯಕ್ಕೆ ಅನಗತ್ಯ ಯೋಜನೆಯಾಗಿದ್ದು, ಇಐಎ ನಡೆಸದೆ ಯೋಜನೆಯಲ್ಲಿ ಕೋಟಿಗಟ್ಟಲೆ ಕಮಿಷನ್ ಪಡೆಯುವ ಹುನ್ನಾರ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries