ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿ 8ನೇ ವಾರ್ಡು ಪೆರಿಂಜದ ಮೋಹನ ಹಾಗೂ ಉಷಾ ದಂಪತಿಯರ ಒಂದುವರೆ ವರ್ಷದ ಹೆಣ್ಣು ಮಗುವಿನ ಚಿಕಿತ್ಸೆಗಾಗಿ ಜಿಲ್ಲಾ ಮೊಗೇರ ಸಂಘದ ನೇತೃತ್ವದಲ್ಲಿ ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಹಸ್ತಾಂತರಿಸಲಾಯಿತು. ಮಗು ಪ್ರಸ್ತುತ ಕಾಞಂಗಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಜಿಲ್ಲಾ ಅಧ್ಯಕ್ಷ ರಾಮಪ್ಪ ಮಂಜೇಶ್ವರ ಹೆತ್ತವರಿಗೆ ಧನ ಸಹಾಯ ಹಸ್ತಾಂತರಿಸಿದರು. ಕಾರ್ಯದರ್ಶಿ ಹರಿಶ್ಚಂದ್ರ ಪುತಿಗೆ ಸದಸ್ಯರಾದ ಹರಿರಾಮ ಕೂಳೂರು, ಸುಂದರ ಸುದೆಂಬಳ, ಗೋಪಾಲ ದರ್ಬೆತಡ್ಕ, ಅಂಗಾರ ಅಜಕ್ಕೋಡು, ಸಂಘಟನಾ ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ಜೊತೆಗಿದ್ದರು.