ಕುಂಬಳೆ: ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಅವರು ಕಾಸರಗೋಡು ಜಿಲ್ಲೆಯಿಂದ ದಿನ ನಿತ್ಯ ವಿದ್ಯಾಭ್ಯಾಸ ಕ್ಕಾಗಿ ಮಂಗಳೂರಿಗೆ ಹೋಗಿ ಬರುವ ವಿದ್ಯಾರ್ಥಿಗಳು ಹಾಗೂ ತಮ್ಮ ಜೀವನೋಪಾಯಕ್ಕಾಗಿ ದಿನ ನಿತ್ಯ ಮಂಗಳೂರು ನ್ನು ಆಶ್ರಯಿಸಿರುವ ಜನಸಾಮಾನ್ಯರು, ವ್ಯಾಪಾರಿಗಳ ಅನುಕೂಲಕ್ಕಾಗಿ ಕೋವಿಡ್ ಮಹಾಮಾರಿ ಯಿಂದ ಸ್ಥಗಿತಗೊಂಡ ಲೋಕಲ್ ರೈಲು ಸೇವೆಯನ್ನು ಶೀಘ್ರ ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ಡಿವಿಷನಲ್ ಮ್ಯಾನೇಜರ್ ಅವರಿಗೆ ಪತ್ರ ಮುಖಾಂತರ ಒತ್ತಾಯಿಸಿದ್ದಾರೆ.