ಕೊಚ್ಚಿ: ಆಲುವಾದಲ್ಲಿ ಪತಿಯ ಕಿರುಕುಳದಿಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅತ್ಯಂತ ದುರಂತವಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತಿದೇವಿ ಹೇಳಿದ್ದಾರೆ. ಘಟನೆ ಕುರಿತು ಡಿವೈಎಸ್ಪಿ ಅವರಿಂದ ವರದಿ ಕೇಳಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಸತಿದೇವಿ ಪ್ರತಿಕ್ರಿಯೆ ನೀಡಿದ್ದಾರೆ. ಎಡಯಪ್ಪುರಂನ ಕಾನೂನು ವಿದ್ಯಾರ್ಥಿನಿ ಮೋಫಿಯಾ ಪರ್ವೀನ್ ಆತ್ಮಹತ್ಯೆ ಮಾಡಿಕೊಂಡವರು.
ಪತಿಯ ಕಿರುಕುಳದ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ಬಂದಿತ್ತು. ಗ್ರಾಮಾಂತರ ಎಸ್ಪಿಗೆ ನೀಡಿರುವ ದೂರಿನ ಪ್ರತಿಯೊಂದಿಗೆ ಮೋಫಿಯಾ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಸಂಬಂಧ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ. ಇದು ಪೊಲೀಸರೇ ನಿಭಾಯಿಸುವ ಸಮಸ್ಯೆಯಾಗಿರುವುದರಿಂದ ಮಹಿಳಾ ಆಯೋಗವು ಮೋಫಿಯಾ ಅವರ ದೂರನ್ನು ಪೋಲೀಸರಿಗೆ ಹಸ್ತಾಂತರಿಸಲಾಗಿತ್ತು ಎಂದು ಮಹಿಳಾ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.