ಕಾಸರಗೋಡು: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಳೆದ 29ವರ್ಷಗಳಿಂದ ಒಳಾಂಗಣ ಸಿಬ್ಬಂದಿಯಾಗಿ ಸೇವೆಸಲ್ಲಿಸಿ ನಿವೃತ್ತರಾದ ಹರಿದಾಸನ್ ಎ ಅವರಿಗೆ ಬೀಳ್ಕೊಡುಗೆ ಸಮಾರಂಭ ದೇವಾಲಯದಲ್ಲಿ ಜರುಗಿತು.
ದೇವಸ್ಥಾನದ ತಂತ್ರಿವರ್ಯ ಶಂಕರನಾರಾಯಣ ಶರ್ಮ ಗೋಸಾಡ ಹರಿದಾಸನ್ ಅವರನ್ನು ಶಾಲುಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಜಯಪ್ರಕಾಶ್‍ನಾರಾಯಣ ಶರ್ಮ ಪೆರಿಂಜೆ ಅಧ್ಯಕ್ಷತೆ ವಹಿಸಿದ್ದರು. ಗಣಪತಿ ಭಟ್ಟ, ದಾಮೋದರನ್ ಅಗಲ್ಪಾಡಿ ಉಪಸ್ಥಿತರಿದ್ದರು. ಮೊಕ್ತೇಸರ ವಿಶ್ವನಾಥ ಭಟ್ಟ ಬೆಂದ್ರೋಡು ಪರಿಚಯ ನೀಡಿದರು. ಅನಂತಗೋವಿಂದ ಶರ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರ್ಷವರ್ಧನ ಕೊಮ್ಮುಂಜೆ ಪ್ರಾರ್ಥನೆ ಹಾಡಿದರು. ವಿಜಯಕುಮಾರ್ ಸ್ವಾಗತಿಸಿದರು. ಉದಯ ನಾರಂಪಾಡಿ ವಂದಿಸಿದರು.