ಉಪ್ಪಳ: ಕೆರಿಯರ್ ಗೈಡೆನ್ಸ್ ಆಂಡ್ ಕೌನ್ಸಿಲಿಂಗ್ ಸೆಲ್ ವತಿಯಿಂದ ಹೇರೂರು ಮೀಪ್ರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾರ್ಯಾಗಾರ ಜರಗಿತು. ಎಸ್.ಎಸ್.ಕ್ಯೂ.ಎಫ್. ತಳಹದಿಯಲ್ಲಿ ಅಧ್ಯಯನ ರೀತಿ, ಅಧ್ಯಯನ ಸಾಧನೆಗಳು, ನೌಕರಿ ಪರಿಣತಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಖಚಿತಪಡಿಸುವಿಕೆ, ಉನ್ನತ ಶಿಕ್ಷಣ ಸಾಧ್ಯತೆಗಳ ಖಚಿತತೆ ಇತ್ಯಾದಿ ವಿಷಯಗಳನ್ನು ಕೇಂದ್ರೀಕರಿಸಿ ಕಾರ್ಯಾಗಾರ ನಡೆಯಿತು.
ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಮಜೀದ್ ಪಚ್ಚಂಬಳ ಉದ್ಘಾಟಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹೀಂ ಮೀಪ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ರೇಶ್ಮಾ, ಕೆರಿಯರ್ ಮಾಸ್ಟರ್ ಶ್ಯಾಂ ಕುಮಾರ್ ಉಪನ್ಯಾಸ ನೀಡಿದರು. ಶಿಕ್ಷಕರಾದ ಯೂಸುಫ್ ಕಾಲಾಯಿ, ಜೋಬಿನ್ ಜೋಸೆಫ್, ವರ್ಷಾ ಉಪಸ್ಥಿತರಿದ್ದರು.