ಪುನೀತ್ ರಾಜ್‌ಕುಮಾರ್ ಸಾವು ಎಲ್ಲರಿಗೆ ದೊಡ್ಡ ಶಾಕ್ ನೀಡಿದೆ. ಅಷ್ಟೊಂದು ಫಿಟ್ ಆಗಿದ್ದರು, ಆರೊಗ್ಯಕರ ಡಯಟ್ (ಆಹಾರಕ್ರಮ) ಪಾಲಿಸುತ್ತಿದ್ದರು, ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ, ಆದರೂ ಹೃದಯಸ್ತಂಭನದಿಂದ ಸಾವನ್ನಪ್ಪಿರುವುದು ನೋಡಿದಾಗ ಇದು ಹೇಗೆ ಸಾಧ್ಯ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಅತೀಯಾದ ವರ್ಕೌಟ್ ಮಾಡಿದ್ದರಿಂದ ಅವರಿಗೆ ಹೃದಯಸ್ತಂಭನವಾಯ್ತೇ? ಎಂಬ ಸಂಶಯದ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿರುವುದರಿಂದ ವರ್ಕೌಟ್ ಮಾಡುವವರಿಗೆ ಒಂದು ರೀತಿಯ ಭಯ ಉಂಟಾಗಿದೆ.
ಕೆಲವರಂತೂ ವರ್ಕೌಟ್ ಮಾಡುವುದನ್ನೆ ನಿಲ್ಲಿಸಿದ್ದಾರೆ. ಕೆಲವೊಂದು ತಪ್ಪು ಸಂದೇಶಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವುದರಿಂದ ಜನರು ಗೊಂದಲಕ್ಕೆ ಒಳಗಾಗಿದ್ದರೆ. ವರ್ಕೌಟ್ ಮಾಡ್ಬೇಕೇ? ಮಾಡುವುದಾದರೆ ಯಾವ ರೀತಿಯಿರಬೇಕು? ಇನ್ನು ಬಾಡಿ ಬಿಲ್ಡ್‌ಗಾಗಿ ತುಂಬಾ ವರ್ಕೌಟ್ ಮಾಡುವವುದಾದರೆ ಹೃದಯಕ್ಕೆ ಅಪಾಯವಿದೆಯೇ ಎಂಬ ಅನೇಕ ಪ್ರಶ್ನೆಗಳು ಜನರನ್ನು ಈಗ ಕಾಡುತ್ತಿದೆ.
ಇದನ್ನು ಮನಗಂಡ ಡಾ. ದೇವಿಪ್ರಸಾದ ಶೆಟ್ಟಿ (ಪ್ರಸಿದ್ಧ ಹೃದ್ರೋಗ ತಜ್ಞರು, ನಾರಾಯಣ ಹೃದಯಾಲಯ) ಜನರು ಏನು ಮಾಡ್ಬೇಕು? ನಮ್ಮ ಹೃದಯದ ಅರೋಗ್ಯದ ಬಗ್ಗೆ ತಿಳಿಯಬೇಕೆಂದರೆ ಮಾಡಿಸಬೇಕಾದ 3 ಪರೀಕ್ಷೆಗಳು ಯಾವುವು ಎಂಬ ಮಾಹಿತಿ ನೀಡಿದ್ದಾರೆ ನೋಡಿ...ಅತೀಯಾದ ವರ್ಕೌಟ್ ಅಪಾಯಕಾರಿಯೇ? ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದರು ಎಂಬ ಅನೇಕ ಸುದ್ದಿಗಳನ್ನು ಕೇಳಿದ್ದೇವೆ. ತುಂಬಾ ಫಿಟ್ ಆಗಿದ್ದವರೂ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿರುವುದನ್ನು ನೋಡಿದ್ದೇವೆ, ಇದಕ್ಕಿಂತ ಮುಂಚೆ ಅವರಿಗೆ ಯಾವುದೇ ಹೃದಯ ಸಮಸ್ಯೆ ಕಾಣಿಸಿಕೊಂಡಿರುವುದಿಲ್ಲ, ಆದರೂ ಹೃದಯಾಘಾತವಾಗಿರುತ್ತೆ ಏಕೆ ಹೀಗಾಗುತ್ತೆ? ಎಂಬುವುದಕ್ಕೆ ಡಾ. ದೇವಿ ಪ್ರಸಾದ ಶೆಟ್ಟಿಯವರು ಈ ರೀತಿಯ ವಿವರಣೆ ನೀಡಿದ್ದಾರೆ ನೋಡಿ...
ಭಾರತೀಯರಲ್ಲಿ ಹೃದಯ ಸಂಬಂಧಿ ಸಮಸ್ಯೆ ಹೆಚ್ಚು ಯೂರೋಪಿಯನ್ಸ್‌ಗಿಂತ ಭಾರತೀಯರಲ್ಲಿ ಹೃದಯಾಘಾತದ ಸಮಸ್ಯೆ 3 ಅಧಿಕ ಎಂಬುವುದಾಗಿ ತಜ್ಞರು ಹೇಳಿದ್ದಾರೆ. ಪ್ರತಿಯೊಂದು ದೇಶದಲ್ಲಿ ಒಂದೊಂದು ಬಗೆಯ ಕಾಯಿಲೆ ಇದೆ. ಆದರೆ ಭಾರತೀಯರಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಭಾರತದಲ್ಲಿ 40 ವರ್ಷ ದಾಟುತ್ತಿದ್ದಂತೆ ಹೃದಯ ಸಂಬಂಧಿ ಹೆಚ್ಚಾಗುತ್ತಿದೆ. ಅದರಲ್ಲೂ ಮಹಿಳೆಯರಿಗಿಂತ ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಕಠಿಣ ವ್ಯಾಯಾಮ ಮಾಡುವವರು ಮಾಡಿಸಬೇಕಾದ 3 ಪರೀಕ್ಷೆಗಳು ಇಸಿಜಿ (ECG) ಎಕೋ ಕಾರ್ಡಿಯೋಗ್ರಾಮ್ (echocardiogram) ಸಿಟಿ ಆಂಜಿಯೋಗ್ರಫಿ (CT angiography) ಈ ಮೂರು ಪರೀಕ್ಷೆಗಳನ್ನು ಮಾಡಿಸಿದಾಗ ರಿಪೋರ್ಟ್ ನಾರ್ಮಲ್ ಬಂದ್ರೆ ಅವರು ಬಾಡಿ ಬಿಲ್ಡ್‌ಗಾಗಿ ಕಠಿಣ ವ್ಯಾಯಾಮ ಮಾಡಿದರೆ ಏನೂ ತೊಂದರೆಯಾಗಲ್ಲ ಎಂದು ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಇಸಿಜಿ: ಇಸಿಜಿ ಮಾಡಿದಾಗ ಹೃದಯ ಬಡಿತ ಯಾವ ರೀತಿ ಇದೆ ಎಂದು ತಿಳಿಯಬಹುದು. * ಹೃದಯಾಘಾತವಾಗುವ ಸೂಚನೆ ಇದೆಯೇ ಎಂಬುವುದನ್ನು ತಿಳಿಯಬಹುದು. * ಹೃದಯಾಘಾತ ಆಗಬಹುದೇ ಎಂಬುವುದನ್ನು ಮುಂಚಿತವಾಗಿ ಊಹಿಸಿ, ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸಹಕಾರಿ.
ಎಕೋಕಾರ್ಡಿಯೋಗ್ರಾಮ್: ಶಬ್ದದ ಅಲೆಗಳ ಮೂಲಕ ಹೃದಯದ ಆರೋಗ್ಯವನ್ನು ತಿಳಿಯಲಾಗುವುದು. ಹೃದಯಕ್ಕೆ ರಕ್ತ ಸಂಚಾರ ಹೇಗೆ ಆಗುತ್ತಿದೆ, ನಿಮ್ಮ ಹರದಯ ಬಡಿತ ಹೇಗಿದೆ ಎಂಬುವುದನ್ನು ಈ ಪರೀಕ್ಷೆಯ ಮೂಲಕ ತಿಳಿಯಬಹುದು. ಇದನ್ನು ನೀವು ವಿಶ್ರಾಂತಿಯಲ್ಲಿದ್ದಾಗ ಅಥವಾ ಕೆಲವೊಂದು ವ್ಯಾಯಾಮಗಳನ್ನು ಮಾಡಿಸಿ ನಂತರ ಮಾಡಲಾಗುವುದು.
ಸಿಟಿ ಆಂಜಿಯೋಗ್ರಫಿ (CT angiography) ಹೃದಯ ಹಾಗೂ ರಕ್ತ ನಾಳಗಳಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುವುದನ್ನು ತಿಳಿಯಲು ಈ ಪರೀಕ್ಷೆ ಸಹಾಯ ಮಾಡುತ್ತೆ. ಅಲ್ಲದೆ ಮೆದುಳಿನಲ್ಲಿರುವ ರಕ್ತನಾಳಗಳಲ್ಲಿ ತೊಂದರೆಯಿದ್ದು, ಅದರಿಂದ ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಇದ್ದರೆ ಅದನ್ನು ಕೂಡ ತಿಳಿಯಬಹುದಾಗಿದೆ. * ಹೃದಯದ ಸ್ಥಿತಿ ಹೇಗಿದೆ ಎಂದು ತೀಲಿಯಲು ಇದು ಸಹಾಯ ಮಾಡುತ್ತೆ * ಅಭಿದಮನಿ, ಅಪದಮನಿ ನಾಳಗಳಲ್ಲಿ ಏನಾದರೂ ಬ್ಲಾಕೇಜ್ ಇದ್ದರೆ ತಿಳಿಯಬಹುದು.
ಎಕ್ಸ್‌ಸೈಜ್ ಕಾರ್ಡಿಯಾಕ್ ಸ್ಟ್ರೆಸ್ ಟೆಸ್ಟ್ (Exercise cardiac stress test) ಇದನ್ನು ETT ಟೆಸ್ಟ್ ಎಂದು ಕರೆಯಲಾಗುವುದು. ನೀವು ವ್ಯಾಯಾಮ ಮಾಡುವಾಗ ಅಥವಾ ಥ್ರೆಡ್‌ಮಿಲ್‌ನಲ್ಲಿ ಓಡುವಾಗ ಅಥವಾ ಸೈಕಲ್ ಹೊಡೆಯುವಾಗ ನಿಮ್ಮ ಹೃದಯ ಹೇಗೆ ಪ್ರತಿಕ್ರಿಯಿಸುತ್ತೆ ಎಂಬುವುದನ್ನು ಈ ಪರೀಕ್ಷೆಯಲ್ಲಿ ತಿಳಿಯಲಾಗುವುದು. ಇದರಲ್ಲಿ ವ್ಯಾಯಾಮ ಮಾಡುವಾಗ ಸುಸ್ತು, ಹೃದಯ ಬಡಿತ, ಉಸಿರಾಟದ ವೇಗ, ರಕ್ತದೊತ್ತಡ ಇವುಗಳನ್ನು ತಿಳಿಯಬಹುದಾಗಿದೆ. ಇದನ್ನು ನೋಡಿದ ಬಳಿಕ ನೀವು ತುಂಬಾ ಕಷ್ಟಕರವಾದ ವ್ಯಾಯಾಮ ಮಾಡಬಹುದ, ಇಲ್ಲವೇ ಎಂಬುವುದನ್ನು ಸೂಚಿಸುತ್ತಾರೆ. ಈ ಪರೀಕ್ಷೆ ಮಾಡಿಸುವುದರಿಂದ ಇವುಗಳನ್ನು ತಿಳಿಯಬಹುದು: * ಎದೆನೋವು, ಉಸಿರಾಟದ ತೊಂದರೆ, ಸುಸ್ತು ಇವುಗಳನ್ನು ತಿಳಿಯಬಹುದು * ಹೃದಯದ ಆರೋಗ್ಯ ತಿಳಿಯಬಹುದು * ನಿಮಗೆ ಹೊಂದುವ ವ್ಯಾಯಾಮ ಮಾಡಲು ಈ ಪರೀಕ್ಷೆ ಸಹಕಾರಿ.