ಕಾಸರಗೋಡು: ನಗರದ ಆನೆಬಾಗಿಲು ವಲಿಯವೀಡ್ ತರವಾಡು ಸಮಿತಿ ವಾರ್ಷಿಕ ಮಹಾಸಭೆ ತರವಾಡುಮನೆಯಲ್ಲಿ ಜರುಗಿತು. ಕೇರಳ ಗ್ರಾಮೀಣ ಬ್ಯಾಂಕ್ ನಿವೃತ್ತ ವಲಯ ಪ್ರಬಂಧಕ ದಾಮೋದರನ್ ಸಮಾರಂಭ ಉದ್ಘಾಟಿಸಿದರು.ತರವಾಡು ಸಮಿತಿ ಅಧ್ಯಕ್ಷ, ಸುರೇಶ್ ಸೂರ್ಲು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಜರುಗಿತು. ಸುಕುಮಾರ್ ಕುದ್ರೆಪ್ಪಾಡಿ, ವಿನಯನ್ ಕೇಳುಗುಡ್ಡೆ, ಉದಯನ್ ಉದಯಗಿರಿ, ಕುಮಾರನ್, ಉಷಾ, ರಂಜಿನಿ ಉಪಸ್ಥಿತರಿದ್ದರು. ಈ ಸಂದರ್ಭ ತರವಾಡು ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸುರೇಶ್ ಸೂರ್ಲು ಅಧ್ಯಕ್ಷ, ಜಯಚಂದ್ರನ್ ಅಡ್ಕತ್ತಬೈಲ್, ಪದ್ಮನಾಭನ್ ಅಡ್ಕತ್ತಬೈಲ್, ಅರವಿಂದನ್ ಪಾರೆಕಟ್ಟ, ರಾಮಕೃಷ್ಣನ್ ಮೀಪುಗುರಿ, ಟಿ. ಕುಮಾರನ್ ಉಪಾಧ್ಯಕ್ಷರು, ಸುಕುಮಾರ್ ಕುದ್ರೆಪ್ಪಾಡಿ ಕಾರ್ಯದರ್ಶಿ, ಜಯಪ್ರಕಾಶ್ ಬೇಳ, ಉಮೇಶ್ ಪಟ್ಲ, ಪ್ರಶಾಂತ್ ಪೆರ್ವಾಡ್ ಜತೆಕಾರ್ಯದರ್ಶಿಗಳು ಹಾಗೂ ವಿನಯನ್ ಕೇಳುಗುಡ್ಡೆ ಅವರನ್ನು ಕೋಶಾಧಿಕರಿಯನ್ನಾಗಿ ಆಯ್ಕೆ ಮಾಡಲಾಯಿತು.