ನವದೆಹಲಿ: ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆ ಭಾರತೀಯ ಗಡಿ ಭದ್ರತಾ ಪಡೆ ಯೋಧರು ಮತ್ತು ಪಾಕಿಸ್ತಾನ ರೇಂಜರ್‍ಗಳು ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ವಿನಿಮಯ ಮಾಡಿಕೊಂಡು ಸೌಹಾರ್ದತೆ ಮೆರೆದರು.
ಗುಜರಾತಿನ ಅಂತಾರಾಷ್ಟ್ರೀಯ ಗಡಿ ಮತ್ತು ರಾಜಸ್ಥಾನದ ಬರ್ಮೇರ್ ಗಡಿ ದ್ವಾರಗಳಲ್ಲಿ ಉಭಯ ದೇಶಗಳ ಯೋಧರು ಪರಸ್ಪರ ಸಿಹಿ ವಿತರಿಸಿ ಶುಭಾಶಯ ಕೋರಿದರು. ಅಲ್ಲದೇ ಎರಡೂ ದೇಶದ ಯೋಧರು ಉಭಯ ಕುಶಲೋಪರಿ ವಿಚಾರಿಸಿ ಸಂಭ್ರಮಿಸಿದರು. ಪಾಕ್ ಮತ್ತು ಭಾರತೀಯ ಯೋಧರುಗಳು ದೀಪಾವಳಿ ಸಂಭ್ರಮವನ್ನು ಪರಸ್ಪರ ಆಚರಿಸಿದ ಸಂಬಂಧ ಪ್ರತಿಕ್ರಿಯೆ ನೀಡಿದ ಬಿಎಸ್‍ಎಫ್ ಅಧಿಕಾರಿಗಳು, ‘ಇಂತಹ ಸಂದರ್ಭಗಳಲ್ಲಿ ಸಿಹಿ ಹಾಗೂ ಶುಭಾಶಯ ವಿನಿಮಯ ಮಾಡಿಕೊಳ್ಳುವುದರಿಂದ ಸೌಹಾರ್ದತೆ ವೃದ್ಧಿಸುತ್ತದೆ. ಗಡಿ ಭಾಗದಲ್ಲಿ ಶಾಂತಿ ನೆಲೆಸುತ್ತದೆ’ ಎಂದು ತಿಳಿಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ಕೊಂಡಾಡಿದ ಪ್ರಧಾನಿ, ಸೇನೆಯೇ ತಮ್ಮ ಕುಟುಂಬ ಎಂದು ಬಣ್ಣನೆ
‘ನಮ್ಮ ಸೈನಿಕರು ತಾಯಿ ಭಾರತಿಯ ‘ಸುರಕ್ಷಾ ಕವಚ’. ಅವರಿಂದಾಗಿಯೇ ದೇಶವಾಸಿಗಳು ಭೀತಿಯಿಲ್ಲದೇ ನಿದ್ದೆ ಮಾಡುತ್ತಾರೆ ಮತ್ತು ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಮೋದಿ ಅವರು ಸೈನಿಕರ ಜತೆಗೆ ದೀಪಾವಳಿ ಆಚರಿಸಿದರು. ಇದಕ್ಕಾಗಿಯೇ ಅವರು ಗುರುವಾರ ಜಮ್ಮು ಮತ್ತು ಕಾಶ್ಮಿ?ರದ ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‍ಗೆ ಆಗಮಿಸಿದ್ದರು. ಈ ವೇಳೆ, ಯೋಧರಿಗೆ ಸಿಹಿ ತಿನ್ನಿಸಿ, ‘ದೇಶ ಕಾಯುವ ಧೈರ್ಯವಂತರಾದ ನೀವೇ ನನ್ನ ಕುಟುಂಬ’ ಎಂದು ಯೋಧರನ್ನು ಉದ್ದೆ?ಶಿಸಿ ಭಾಷಣ ಮಾಡಿದರು. ಜತೆಗೆ, 2016ರ ಸರ್ಜಿಕಲ್ ಸ್ಟ್ರೈಕ್ ವೇಳೆ ಯೋಧರು ತೋರಿದ ದಿಟ್ಟತನವನ್ನು ಕೊಂಡಾಡಿದರು. ಕಳೆದ ವರ್ಷ ಮೋದಿ ಅವರು ರಾಜಸ್ಥಾನದ ಜೈಸಲ್ಮೆರ್‍ನ ಲೋಂಗೆವಾಲದಲ್ಲಿ ಯೋಧರ ಜತೆ ದೀಪಾವಳಿ ಆಚರಿಸಿದ್ದರು.
ದೇಶೀಯ ಶಸ್ತ್ರಾಸ್ತ್ರ ಅಭಿವೃದ್ಧಿ ಹೆಚ್ಚಳ: ಹಿಂದಿನ ದಿನಗಳಲ್ಲಿ ರಕ್ಷಣಾ ಸಾಮಗ್ರಿಗಳಿಗಾಗಿ ವಿದೇಶಗಳ ಅವಲಂಬನೆ ಇತ್ತು. ದೇಶೀಯವಾಗಿ ಶಸ್ತ್ರಾಸ್ತ್ರಗಳ ತಯಾರಿಕೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿರಲಿಲ್ಲ. ಸದ್ಯ, ಆ ಕೊರತೆಯನ್ನು ನೀಗಿಸಿ ದೇಶೀಯವಾಗಿ ರಕ್ಷಣಾ ಸಾಮಗ್ರಿಗಳ ತಯಾರಿಕೆ ಭಾರಿ ಪ್ರಮಾಣದಲ್ಲಿ ಆಗುತ್ತಿದೆ. ರಕ್ಷಣಾ ಕ್ಷೆ?ತ್ರಕ್ಕೆ ಸರಕಾರ ಬಲ ತುಂಬಿದೆ. ನಿಮ್ಮೆಲ್ಲರ ಶೌರ್ಯದಿಂದಾಗಿ ದೇಶದಲ್ಲಿ ಶಾಂತಿ, ಸ್ಥಿರತೆ ನೆಲೆಸಿದೆ. 'ಏಕ ಭಾರತ , ಶ್ರೆ?ಷ್ಠ ಭಾರತದ' ಮೂಲ ರಕ್ಷಕರು ನೀವೇ. ತಾಯಿ ಭಾರತಿಯ ಸುರಕ್ಷಾ ಕವಚವು ಕೂಡ ನೀವೇ ಆಗಿದ್ದಿರಿ ಎಂದು ನರೇಂದ್ರ ಮೋದಿ ಅವರು ಯೋಧರನ್ನು ಹಾಡಿ ಹೊಗಳಿದರು.