ಕಾಸರಗೋಡು: ಭೂರಹಿತರಿಲ್ಲದ ಕೇರಳ ಯೋಜನೆಯನ್ವಯ ಮೂರು ಸೆಂಟ್ ಸ್ಥಳ ಮಂಜೂರುಮಾಡಿ ನೀಡಿದವರಿಗೆ ಅವರ ಜಾಗದ ಗಡಿ ಗುರುತಿಸಿ ನೀಡುವ ಪ್ರಕ್ರಿಯೆ ಚುರುಕುಗೊಳಿಸುವಂತೆ ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ. ಅವರು ಕಾಸರಗೋಡು ತಾಲೂಕು ಅಭಿವೃದ್ಧೀ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಸರಗೋಡು ನಗರದ ಎಂ.ಜಿ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣ ಕಾಂಗಾರಿಯಲ್ಲಿ ಕಾಲ್ನಡೆ ಹಾದಿಯನ್ನು ಸಂಚಾರಯೋಗ್ಯಗೊಳಿಸಬೇಕು, ಅಣಂಗೂರಿನ ಆಯುರ್ವೇದ ಆಸ್ಪತ್ರೆ ಹಿಂಭಾಗದ ಸಂಚಾರ ವಯವಸ್ಥೆ ಸುಗಮಗೊಳಿಸುವುದರ ಜತೆಗೆ, ಇಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಜಾಗ ಮಂಜೂರುಗೊಳಿಸಬೇಕು, ಕಾಸರಗೋಡು ಜನರಲ್ ಆಸ್ಪತ್ರೆಯ ಡಯಾಲಿಸಿಸ್ ಘಟಕದ ಕಾರ್ಯಕ್ಷಮತೆ ಹೆಚ್ಚಿಸಬೇಖು ಹಾಗೂ ನಬಾರ್ಡ್ ಫಂಡ್ ಬಳಸಿ ನಿರ್ಮಿಸುತ್ತಿರುವ ಆಸ್ಪತ್ರೆ ಕಟ್ಟಡ ಕಾಮಗಾರಿ ಶೀಘ್ರ ಪೂರ್ತಿಗೊಳಿಸುವಂತೆಯೂ ಆಗ್ರಹಿಸಲಾಯಿತು.
ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎ ಸೈಮಾ, ತಹಸೀಲ್ದಾರ್ ಎಂ.ಬಿ ರಾಜನ್, ಸಭೆಯಲ್ಲಿ ಜಿಪಂ ಸದಸ್ಯರು, ಗ್ರಾಪಂ ಸದಸ್ಯರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.