ಕಾಸರಗೋಡು: ಕೂಡ್ಲು ಸಮೀಪದ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕಮಾಸ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಕಾರ್ತಿಕ ಪೂಜಾ ಮಾಸ ಡಿಸೆಂಬರ್ 4ರ ತನಕ ಜರುಗಲಿದೆ. ಶ್ರೀ ಕ್ಷೇತ್ರದತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ದಾಮೋದರತಂತ್ರಿವರ್ಯರ ಶುಭಾಶೀವಾದಗಳೊಂದಿಗೆ ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿವರ್ಯರುದೀಪ ಬೆಳಗಿಸುವ ಮೂಲಕ ದೀಪೋತ್ಸವ ಉದ್ಘಾಟಿಸಿದರು.
ಆಡಳಿತಮೊಕ್ತೇಸರ ಕಿರಣ್ ಪ್ರಸಾದ್ ಕೂಡ್ಲು, ಅನುವಂಶಿಕಮೊಕ್ತೇಸರ ಸದಾಶಿವ, ಟ್ರಸ್ಟ್ ಕೋಶಾಧಿಕಾರಿ ಸುರೇಶ್‍ನಾಯ್ಕ್ ಸದಸ್ಯರಾದ ಶರತ್ ನಾಯ್ಕ್, ಶಶೀಂದ್ರನ್,ಸುನಂದ ಮಹಿಳಾ ಸಂಘದ ರಕ್ಷಾಧಿಕಾರಿ ಆಶಾ ಉಪಾದ್ಯಾಯ, ಅಧ್ಯಕ್ಷೆ ರತ್ನ ಪಾಯಿಚ್ಚಾಲ್, ಕಾರ್ಯದರ್ಶಿ ಲಾವಣ್ಯ ಭುವನೇಶ್, ಯುವಕ ಸಂಘದಅಧ್ಯಕ್ಷ ರಮೇಶ್, ಕಾರ್ಯದರ್ಶಿ ಸನತ್ ಶಿವಮಂಗಿಲ,ಕೋಶಾಧಿಕಾರಿ ಲಿತೇಶ್ ಉಪಸ್ಥಿತರಿದ್ದರು. ಈ ಸಂದರ್ಭ ಶ್ರೀ ಚಾಮುಂಡೇಶ್ವರಿ ಭಜನಾಸಂಘದವರಿಂದ ಭಜನೆ, ಹಾಗೂ ಪ್ರಧಾನ ಅರ್ಚಕ ಶ್ರೀ ಸುಬ್ರಾಯ ಕಾರಂತ ಮತ್ತುಸಹಾಯಕ ಅರ್ಚಕ ಗೋಪಾಲಕೃಷ್ಣ ಕಾರಂತ ಇವರ ನೇತೃತ್ವದಲ್ಲಿ ಶ್ರೀದೇವರಿಗೆ ದೀಪೋತ್ಸವದೊಂದಿಗೆ ವಿಶೇಷ ಕಾರ್ತಿಕಪೂಜೆ, ಶೇಷವನ ಸ್ಕಂದ ಗೋಶಾಲೆಯಲ್ಲಿ ಗೋಪೂಜೆ ನೆರವೇರಿತು. ಗೋಶಾಲಾ ಸಂಚಾಲಕ ಮುರಳೀಧರ ಶೆಟ್ಟಿ, ಸಹಸಂಚಾಲಕ ನವೀನ, ಕೋಶಾಧಿಕಾರಿ ಸುಜನ್ ಸಹಕರಿಸಿದರು. ಕಾರ್ತಿಕಮಾಸ ದೀಪೋತ್ಸವದಅಂಗವಾಗಿ ಪ್ರತಿದಿನ ಸಂಜೆ 6.30ರಿಂದ ವಿವಿಧ ಭಜನಾಸಂಘಗಳಿಂದ ಭಜನೆ, 8.00ಕ್ಕೆ ದೀಪೋತ್ಸವದೊಂದಿಗೆ ವಿಶೇಷ ಕಾರ್ತಿಕ ಪೂಜೆ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.