ಪೆರ್ಲ: ಬೇಂಗಪದವು ಗಿರಿಜಾಂಬಾ ಎಎಲ್ ಪಿ ಶಾಲೆಗೆ ಎಣ್ಮಕಜೆ ಗ್ರಾಮ ಪಂಚಾಯತು ವತಿಯಿಂದ ನಿರ್ಮಿಸಿದ ಶೌಚಾಲಯ ಹಸ್ತಾಂತರ ಕಾರ್ಯಕ್ರಮ ಸೋಮವಾರ ಜರಗಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ ಜೆ.ಎಸ್. ಕೀಲಿ ಕೈಯನ್ನು ಶಾಲಾ ಮುಖ್ಯೋಪಾಧ್ಯಾಯ ಶಿವಕುಮಾರ್ ಮಾಸ್ತರ್ ಗೆ ಹಸ್ತಾಂತರಿಸಿದರು.ವಾರ್ಡ್ ಸದಸ್ಯೆ ಉಷಾ ಕುಮಾರಿ,ಪಂ.ಸದಸ್ಯ ಮಹೇಶ್ ಭಟ್, ಶಾಲಾ ರಕ್ಷಕ ಶಿಕ್ಷಕ ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.