ಚಳಿಗಾಲದ ಆರಂಭವಾಗುತ್ತಿದ್ದ ಹಾಗೆಯೇ ಒಣ, ಬಿರುಕು ಬಿಟ್ಟ ಚರ್ಮ-ತುಟಿ, ತುರಿಕೆ, ಒರಟಾದ ಕೈಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ತ್ವಚೆಗೆ ಕಾಳಜಿಯನ್ನು ತೆಗೆದುಕೊಂಡರೆ, ಈ ಸಮಸ್ಯೆಗಳಿಂದ ಪಾರಾಗಬಹುದು. ಅದಕ್ಕೆ ಸಹಾಯ ಮಾಡಬಹುದಾದ ಕೆಲವು ಸಲಹೆಗಳನ್ನು ಈ ಲೇಖನದಲ್ಲಿ ಹಂಚಿಕೊಂಡಿದ್ದೇವೆ. ಇದನ್ನು ಅನುಸರಿಸುವುದರ ಮೂಲಕ, ಚಳಿಗಾಲದಲ್ಲಿ ಆರೋಗ್ಯಕರ ತ್ವಚೆಯನ್ನು ಕಾಪಾಡಿಕೊಳ್ಳಬಹುದು.
1. ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಿ. ಬದಲಾಗಿ, ಉಗುರು ಬೆಚ್ಚಗಿನ ನೀರನ್ನು ಬಳಸಿ. ಬಿಸಿನೀರಿನ ಸ್ನಾನವು ದೇಹದಿಂದ ಅಗತ್ಯ ಅಂಶಗಳನ್ನು ತೆಗೆದುಹಾಕುತ್ತದೆ. ಆದ್ದರಿಂದ, ನಿಮ್ಮ ಸ್ನಾನದ ಸಮಯವನ್ನು ಗರಿಷ್ಠ 10 ನಿಮಿಷಗಳವರೆಗೆ ಮಿತಿಗೊಳಿಸುವುದು ಮತ್ತು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡದಿರುವುದು ಅತ್ಯಗತ್ಯ.
2. ನಿಮ್ಮ ತ್ವಚೆಯನ್ನು ತೇವಗೊಳಿಸುವಂತಹ ಬಾಡಿ ವಾಶ್ ಅನ್ನು ಆರಿಸಿಕೊಳ್ಳಿ. ಏಕೆಂದರೆ, ಕೆಲವು ರೀತಿಯ ಸೋಪ್ ತ್ವಚೆಯ ಮೇಲೆ ಕಠಿಣವಾಗಿರುವುದರಿಂದ ನೈಸರ್ಗಿಕ ಅಥವಾ ಸಾವಯವವಾಗಿರುವ ಸೋಪ್ ಅನ್ನು ಆರಿಸಿಕೊಳ್ಳಿ.
3. ಚರ್ಮಕ್ಕೆ ಹಾನಿಯಾಗದಂತಹ ಬಾಡಿ ಬ್ರಷ್‌ಗಳನ್ನು ಬಳಸಿ.
4. ಚರ್ಮವನ್ನು ಕೆರಳಿಸುವ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ನಿಮ್ಮ ಸ್ವೆಟರ್‌ಗಳು ಮತ್ತು ಕೋಟ್‌ಗಳ ಅಡಿಯಲ್ಲಿ ಹತ್ತಿ ಶರ್ಟ್ ಧರಿಸಿ ಇದರಿಂದ ಉಣ್ಣೆಯು ಚರ್ಮಕ್ಕೆ ಕಿರಿಕಿರಿಯಾಗುವುದಿಲ್ಲ ಮತ್ತು ಒಣಗುವುದಿಲ್ಲ.
5. ನೀವು ಸ್ನಾನ ಮಾಡಿದ ನಂತರ, ನಿಮ್ಮ ದೇಹವನ್ನು ಒಣಗಿಸಿ ಮತ್ತು ತಕ್ಷಣವೇ ಮಾಯಿಶ್ಚರೈಸರ್ ಅನ್ನು ಹಚ್ಚಿ.ಒಣತ್ವಚೆ ತಡೆಯಲು ಕೆಲವೊಂದು ಮನೆಮದ್ದುಗಳು: ಸಲಹೆ-1: ಬೀಟ್ರೂಟ್ ಫೇಸ್ ಮಾಸ್ಕ್: ಬೇಕಾಗುವ ಪದಾರ್ಥಗಳು: ಬೀಟ್ರೂಟ್ (ತುರಿದ) ಅರ್ಧ ನಿಂಬೆ ರಸ ಲೋಳೆಸರ ಬಳಸುವುದು ಹೇಗೆ?: ಬೀಟ್ರೂಟ್‌ನ್ನು ಚೆನ್ನಾಗಿ ರುಬ್ಬಿಕೊಂಡು, ಸರಿಯಾಗಿ ಬೀಟ್ ಮಾಡಿ, ನಂತರ ಅದಕ್ಕೆ ನಿಂಬೆ ರಸವನ್ನು ಸೇರಿಸಿ. ಅಂತಿಮವಾಗಿ, ಅಲೋವೆರಾ ಜೆಲ್ ಅನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಅದು ಒಣಗಲು ಪ್ರಾರಂಭಿಸಿದಾಗ, ಮತ್ತೆ ಸ್ವಲ್ಪ ಪೇಸ್ಟ್ ಹಚ್ಚಿ. ಇದನ್ನು 30-45 ನಿಮಿಷಗಳ ಕಾಲ ಬಿಡಿ, ತೊಳೆಯಿರಿ. ಇದನ್ನು ವಾರಕ್ಕೆ 3 ಬಾರಿ ಹಚ್ಚಬಹುದು.