ಕೊಟ್ಟಾರಕ್ಕರ: ಇಂಧನ ಬೆಲೆ ಇಳಿಕೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಯುವಮೋರ್ಚಾ ಕಾರ್ಯಕರ್ತರ ಮೇಲೆ ಪೋಲೀಸರು ಅಮಾನುಷವಾಗಿ ಥಳಿಸಿದ ಘಟನೆ ನಡೆದಿದೆ. ಪ್ರತಿಭಟನೆಯ ವಿರುದ್ಧ ಪೋಲೀಸರು ಲಾಠಿ ಬೀಸಿದರು. ಹಲವಾರು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಯುವಮೋರ್ಚಾ ಕಾರ್ಯಕರ್ತರು ನಿನ್ನೆ ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಅವರ ಕಚೇರಿಗೆ ಮೆರವಣಿಗೆ ನಡೆಸಿದರು. ಕೊಲ್ಲಂನ ಕೊಟ್ಟಾರಕ್ಕರದಲ್ಲಿರುವ ಕಚೇರಿಗೆ ಮೆರವಣಿಗೆ ನಡೆಸಲಾಯಿತು. ಆದರೆ ಪ್ರತಿಭಟನಾಕಾರರ ಮೇಲೆ ಪೋಲೀಸರು ಲಾಠಿ ಪ್ರಹಾರ ನಡೆಸಿದರು.
ಹಲವು ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪೋಲೀಸರು ಘಾ|ಸಿಗೊಳಿಸುವ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಘಟನೆಗೆ ತೀವ್ರ ಪ್ರತಿಭಟನೆಯೂ ವ್ಯಕ್ತವಾಗಿದೆ.
ಯುವ ಮೋರ್ಚಾದ ಹೋರಾಟವನ್ನು ಹೆದರಿಸಿ ಹೊಸಕುವ ಯತ್ನವನ್ನು ಬಿಡುವುದಿಲ್ಲ ಎಂದು ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಿ.ಆರ್.ಪ್ರಫುಲ್ ಕೃಷ್ಣ ಹೇಳಿರುವರು. ರಾಜ್ಯ ಸರ್ಕಾರ ಇಂಧನ ತೆರಿಗೆ ಇಳಿಸದಿರುವುದನ್ನು ವಿರೋಧಿಸಿ ಯುವಮೋರ್ಚಾ ರಾಜ್ಯಾದ್ಯಂತ ನಡೆಸುತ್ತಿರುವ ಆಂದೋಲನವನ್ನು ಸರ್ಕಾರ ಪೋಲೀಸರನ್ನು ಬಳಸಿ ಹತ್ತಿಕ್ಕುತ್ತಿದೆ.
ತಿರುವನಂತಪುರ ಮತ್ತು ಪಾಲಕ್ಕಾಡ್ ನಲ್ಲಿ ನಡೆದ ಹೋರಾಟಗಳ ವಿರುದ್ಧ ಪ್ರಚೋದನೆ ಇಲ್ಲದೆ ಲಾಠಿ ಚಾರ್ಜ್ ನಡೆಸಲಾಗಿದೆ. ಇಂಧನ ಬೆಲೆ ಇಳಿಸುವ ಬದಲು ಸರ್ಕಾರ ಪೋಲೀಸರನ್ನು ಬಳಸಿಕೊಂಡು ಉದ್ದೇಶಪೂರ್ವಕವಾಗಿ ಹಿಂಸಾಚಾರ ನಡೆಸುತ್ತಿದೆ. ಇದರ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಲಾಗುವುದು. ಈ ಹಿಂದೆ ಕೇಂದ್ರ ಸರ್ಕಾರ ಇಂಧನ ಬೆಲೆ ಇಳಿಸಿದರೆ ರಾಜ್ಯದಲ್ಲೂ ಕಡಿಮೆ ಮಾಡಲಾಗುವುದೆಂದ ರಾಜ್ಯ ಸರ್ಕಾರ ಇದೀಗ ಅದನ್ನು ಮರೆತಿರುವುದು ಹೇಯಕರ. ಪ್ರತಿಭಟನೆ ಇನ್ನಷ್ಟು ಪ್ರಬಲಗೊಳ್ಳಲಿದೆ ಎಂದವರು ಎಚ್ಚರಿಸಿದರು.