ಕಾಸರಗೋಡು: ಕೇಂದ್ರ ಸರ್ಕಾರ ಇಂಧನ ಬೆಲೆ ಕಡಿತಗೊಳಿಸಿ ದೇಶಕ್ಕೆ ಮಾದರಿಯಾಗಿರುವಂತೆ ಕೇರಳವೂ ಇಂಧನ ಬೆಲೆ ಇಳಿಕೆಗೆ ಮುಂದಾಗಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ತಿಳಿಸಿದ್ದಾರೆ.
ಅವರು ಇಂಧನಬೆಲೆ ಕಡಿತಗೊಳಿಸುವಂತೆ ಆಗ್ರಹಿಸಿ ಮಹಿಳಾಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಕಂದ ಶನಿವಾರ ನಡೆದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಧರಣಿ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಉಮಾ ಕಡಪ್ಪುರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸವಿತಾ ಟೀಚರ್, ಪಿ.ರಮೇಶ್, ಸುಧಾಮ ಗೋಸಾಡ, ಶ್ರೀಲತಾ ಟೀಚರ್, ಸವಿತಾ ಬಾಳಿಕೆ, ಕೆ.ಸಿಂಧು, ಪ್ರಮಿಳಾ ಮಜಲ್, ಹರೀಶ್ ನಾರಂಪಾಡಿ, ಸುಕುಮಾರ್ ಕುದ್ರೆಪ್ಪಾಡಿ, ಪಿ.ಆರ್. ಸುನಿಲ್ ಉಪಸ್ಥಿತರಿದ್ದರು.
ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಬದಿಯಡ್ಕ ಸ್ವಾಗತಿಸಿದರು. ಉಷಾಸುರೇಶ್ ವಂದಿಸಿದರು.