ತಿರುವನಂತಪುರಂ: ಕೊರೊನಾ ಭೀತಿಯಿಂದ ಮುಚ್ಚಲ್ಪಟ್ಟ ಶಾಲೆಗಳು ಇಂದು ಪುನರಾರಂಭಗೊಂಡಿದೆ. ಹದಿನೆಂಟು ತಿಂಗಳುಗಳ ಸುಧೀರ್ಘ ಬಿಡುವಿನ ಬಳಿಕ ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಿದೆ. ತಿರುವನಂತಪುರದ ಕಾಟನ್ ಹಿಲ್ ಶಾಲೆಯಲ್ಲಿ ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಪ್ರವೇಶ ಸಮಾರಂಭ ನಡೆಯಿತು. ಶಿಕ್ಷಣ ಸಚಿವ ವಿ.ಎಸ್. ಶಿವಂಕುಟ್ಟಿ, ಆರೋಗ್ಯ ಸಚಿವೆ ವೀಣಾ ಜಾರ್ಜ್, ಸಾರಿಗೆ ಸಚಿವ ಆಂಟನಿ ರಾಜು, ಆಹಾರ ಸಚಿವ ಜಿ.ಆರ್.ಅನಿಲ್ ಚಾಲನೆ ನೀಡಿದರು.
ಒಂದರಿಂದ ಏಳನೇ ತರಗತಿ ಹಾಗೂ ಹತ್ತು ಮತ್ತು ಪ್ಲಸ್ 2 ತರಗತಿಯ ವಿದ್ಯಾರ್ಥಿಗಳಿಗೆ ಇಂದು ತರಗತಿಗಳು ಆರಂಭಗೊಂಡಿತು. ಇಂದು ಸುಮಾರು 10 ಲಕ್ಷ ಮಕ್ಕಳು ತರಗತಿಗಳಿಗೆ ಹಾಜರಾದರು ಎಂದು ಅಂದಾಜಿಸಲಾಗಿದೆ. ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಶಾಲೆಗಳು ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಎಂಟು ಮತ್ತು ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಇದೇ ತಿಂಗಳ 15 ರಂದು ತರಗತಿಗಳು ಪ್ರಾರಂಭವಾಗಲಿವೆ. ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆಯೊಂದಿಗೆ ಶಾಲೆಗೆ ಬರುವ ಕ್ರಮ ಕ್ಯೆಗೊಳ್ಳಲಾಗಿತ್ತು. ವಿದ್ಯಾರ್ಥಿಗಳ ದೇಹದ ಉಷ್ಣತೆ ಮಾಪನಗ್ಯೆದು ತರಗತಿಗೆ ಕಳಿಸುವ ವ್ಯವಸ್ಥೆ ಏರ್ಪಡಿಸಲಾಗಿತ್ತು.
ತರಗತಿಗಳು ಕೊರೋನಾ ಸುರಕ್ಷತಾ ಮಾನದಂಡಗಳ ಅನುಸರಣೆಯೊಂದಿಗೆ ನಡೆಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಸಾಂದರ್ಭಿಕವಾಗಿ ಕೈ ತೊಳೆಯಲು ಸೌಲಭ್ಯಗಳನ್ನು ಒದಗಿಸಲಾಗುವುದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ತರಗತಿಗಳನ್ನು ಆಯೋಜಿಸಲಾಗಿದೆ. ಇದನ್ನು ಸಾಧ್ಯವಾಗಿಸಲು, ತರಗತಿಗಳನ್ನು ಬ್ಯಾಚ್‌ಗಳಲ್ಲಿ ನಡೆಸಲಾಗುತ್ತದೆ. ಈ ಹಿಂದೆ ಬಯೋ ಬಬಲ್ ಮಾದರಿಯಲ್ಲಿ ತರಗತಿಗಳನ್ನು ನಡೆಸಲಾಗುವುದು ಎಂದು ಸರಕಾರ ಹೇಳಿತ್ತು.
ಮೊದಲ ಎರಡು ವಾರ ತರಗತಿಗಳಿಗೆ ಕಡ್ಡಾಯ ಹಾಜರಾತಿ ಇರುವುದಿಲ್ಲ. ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಅಥವಾ ಮೇಲ್ವಿಚಾರಣೆಯಲ್ಲಿರುವ ಮಕ್ಕಳು ತರಗತಿಗೆ ಹಾಜರಾಗಬಾರದು. ಲಸಿಕೆ ಹಾಕದ ಶಿಕ್ಷಕರಿಗೆ ಆನ್‌ಲೈನ್ ತರಗತಿಗಳನ್ನು ಮುಂದುವರಿಸಲು ಸರ್ಕಾರ ಹೇಳಿದೆ.
ಚಿತ್ರ: ಬೇಳ ಸಂತ ಬಾರ್ತಲೋಮಿಯ ಶಾಲೆಯಲ್ಲಿ ಇಂದು ಬೆಳಗ್ಗೆ ಕಂಡುಬಂದ ದೃಶ್ಯದಿಂದ
ನೀರ್ಚಾಲು ಮಹಾಜನ ಶಾಲಾ ಪ್ರವೇಶ ದ್ವಾರ ಅಲಂಕರಿಸಿರುವುದು