ನವದೆಹಲಿ:ಕೇಂದ್ರ ಸಂಪುಟವು ಬುಧವಾರ ನಡೆಯಲಿರುವ ತನ್ನ ಮುಂದಿನ ಸಭೆಯಲ್ಲಿ ಕೃಷಿ ಕಾಯ್ದೆಗಳ ವಾಪಸಾತಿಯನ್ನು ಅನುಮೋದಿಸಲಿದೆ ಎಂದು ಅನಾಮಿಕ ಸರಕಾರಿ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಸಂಪುಟದ ಅನುಮೋದನೆಯ ಬಳಿಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಪ್ರಸ್ತಾವವನ್ನು ಸಂಸತ್ತು ಕೈಗೆತ್ತಿಕೊಳ್ಳಲಿದೆ.