ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ದೀಪಾವಳಿಯ ಪ್ರಯುಕ್ತ ವಿದ್ಯಾಪೀಠದ ಮಕ್ಕಳು ಹಾಗೂ ಶಿಕ್ಷಕರ ಸಮಕ್ಷಮದಲ್ಲಿ ಗೋಪೂಜಾ ಕಾರ್ಯಕ್ರಮ ನೆರವೇರಿತು.
ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ ಅವರು ದೀಪಬೆಳಗಿ ಗೋ ಆರತಿ,ಗೋಗ್ರಾಸದೊಂದಿಗೆ ಪೂಜೆ ಸಲ್ಲಿಸಿದರು.
ಶಾಲಾ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯ ಶಿಕ್ಷಕಿ ಚಿತ್ರಾಸರಸ್ವತಿ, ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ, ಕಂಪ್ಯೂಟರ್ ಶಿಕ್ಷಕಿ ಶಿವಕುಮಾರಿ ಕುಂಚಿನಡ್ಕ ಹಾಗೂ ಶಾಲೆಯ ಶಿಕ್ಷಕವರ್ಗ, ವಿದ್ಯಾರ್ಥಿಗಳು ಗೋಗ್ರಾಸ ನೀಡಿ ಗೋ ಪೂಜೆ ಸಲ್ಲಿಸಿದರು.