ಕುಂಬಳೆ: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕುಂಬಳೆ ವಲಯ ಪ್ರತಿನಿ ಸಮ್ಮೇಳನ ಕುಂಬಳೆ ಪೈ ಸಭಾಂಗಣದಲ್ಲಿ ಜರಗಿತು. ಧ್ವಜಾರೋಹಣಗೈದ ವಲಯ ಅಧ್ಯಕ್ಷ ವೇಣು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಸರಗೋಡು ಜಿಲ್ಲಾ ಅಧ್ಯಕ್ಷ ಶರೀಫ್ ಫ್ರೇಮ್ ಆರ್ಟ್ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ ನಿರಂತರವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಸಂಘಟನೆಯು ಬಲವಾಗುತ್ತದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಮನೋಹರನ್ ಎನ್ವೀಸ್, ಜಿಲ್ಲಾ ಖಜಾಂಜಿ ಸುಗುಣನ್ ಇರಿಯ, ಇನ್ಶೂರೆನ್ಸ್ ಸಂಚಾಲಕ ಎನ್. ಎ. ಭರತನ್, ಕ್ಷೇಮನಿಧಿ ಸಂಚಾಲಕ ಹರೀಶ್ ಪಾಲಕ್ಕುನ್ನು, ಜಿಲ್ಲಾ ಉಪಾಧ್ಯಕ್ಷ ಸುದರ್ಶನ್, ಜಿಲ್ಲಾ ಜೊತೆಕಾರ್ಯದರ್ಶಿ ಸುನಿಲ್ ಕುಮಾರ್, ವಲಯ ಕೋಶಾಧಿಕಾರಿ ವಿಜಯನ್ ಮಾತನಾಡಿದರು. ಕುಂಬಳೆ ವಲಯ ಕಾರ್ಯದರ್ಶಿ ರಾಮಚಂದ್ರ ಕುಂಬಳೆ ಸ್ವಾಗತಿಸಿ, ಜೊತೆಕಾರ್ಯದರ್ಶಿ ಉದಯ ಕುಮಾರ್ ಮೈಕುರಿ ವಂದಿಸಿದರು. ಇದೇ ಸಂದರ್ಭದಲ್ಲಿ ಎಕೆಪಿಎ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ನಗದು ಪುರಸ್ಕಾರ ಹಾಗೂ ಸ್ಮರಣಿಕೆಯನ್ನು ನೀಡಲಾಯಿತು. ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು. ನೂತನ ಸಮಿತಿಯನ್ನು ಆರಿಸಲಾಯಿತು. ಸುನಿಲ್ ಮಂಜೇಶ್ವರ ಅಧ್ಯಕ್ಷ, ಸುರೇಶ್ ಆಚಾರ್ಯ ಕಾರ್ಯದರ್ಶಿ, ವೇಣು ನೀರ್ಚಾಲು ಕೋಶಾಧಿಕಾರಿಯಾಗಿ ಆಯ್ಕೆಯಾದರು.