HEALTH TIPS

ಮಂಜೇಶ್ವರದಲ್ಲಿ ಜಲಜೀವನ್ ಮಿಷನ್ ಕಾರ್ಯಾಗಾರ: ನೀರಿನ ಸದ್ಬಳಕೆಯಿಂದ ಆರೋಗ್ಯಕರ ಸಮಾಜ ನಿರ್ಮಾಣ: ಪದ್ಮನಾಭ ಎಂ.ಟಿ.

                                              

           ಮಂಜೇಶ್ವರ: ಪ್ರಕೃತಿಯ ಅಮೂಲ್ಯ ಕೊಡುಗೆಯಲ್ಲಿ ಒಂದಾದ ನೀರು ಪ್ರಾಚೀನ ಋಷಿ-ಮುನಿಗಳು, ದಾಸ-ಸಂತ, ವಚನಕಾರರಿಂದ ತೊಡಗಿ ಇಂದಿನ ನವ್ಯೋದಯ ಕವಿಗಳಿಂದಲೂ ಹೊಗಳಿಸಲ್ಪಟ್ಟ ನೀರು ವಿಶ್ವದಲ್ಲಿ 7/7 ಶೇ. ದಷ್ಟಿದ್ದರೂ ಈ ಪೈಕಿ ಬಳಕೆಗೆ ಯೋಗ್ಯವಾದ ನೀರಿನ ಲಭ್ಯತೆ ಶೇ.0.357 ಮಾತ್ರವಾಗಿದೆ. ಈ ಕಾರಣದಿಂದ ಸೂಕ್ತ ರೀತಿಯಲ್ಲಿ ಬಳಸಿದಲ್ಲಿ ಮಾತ್ರ ಆರೋಗ್ಯಕರ ಸ್ವಚ್ಚ ಸಮಾಜ ನಿರ್ಮಾಣ ಸಾಧ್ಯ ಎಂದು ಕಾಸರಗೋಡಿನ ಜಲಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪದ್ಮನಾಭ ಎಂ.ಟಿ ತಿಳಿಸಿದರು.

              ಶ್ರೀಸತ್ಯಸಾಯಿ ಓರ್ಪನೇಜ್ ಟ್ರಸ್ಟ್ ಮಂಜೇಶ್ವರ ಹಾಗೂ ಮಂಜೇಶ್ವರ ಗ್ರಾ.ಪಂ. ಸಹಯೋಗದೊಂದಿಗೆ ಮಂಜೇಶ್ವರ ಗ್ರಾ.ಪಂ. ಸಭಾಂಗಣದಲ್ಲಿ ಗುರುವಾರ ಜರಗಿದ ಜಲಜೀವನ್ ಮಿಷನ್ ಗ್ರಾಮೀಣ ಶುದ್ದಜಲ ಸರಬರಾಜು ಯೋಜನೆಯ ಕಾರ್ಯಾಗಾರದಲ್ಲಿ ಯೋಜನೆಯ ಅನುಷ್ಠಾನ ಹಾಗೂ ಬಳಕೆಯ ಕುರಿತು ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

              ಜಲಜೀವನ್ ಮಿಷನ್ ಮೂಲಕ ಮಂಜೇಶ್ವರ ಗ್ರಾ.ಪಂ.ವ್ಯಾಪ್ತಿಯ ಫಲಾನುಭವಿಗಳ ಮನೆಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಕಾರ್ಯಚಟುವಟಿಕೆಗಳು ಪ್ರಾರಂಭಗೊಂಡಿದೆ. ನಾಗರಿಕರು ಸಂಪೂರ್ಣ ಸದುಪಯೋಗವನ್ನು ಪ್ರಜ್ಞಾವಂತಿಕೆಯಿಂದ ಪಡೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು.


            ಕಾಸರಗೋಡು ಜಲಪ್ರಾಧಿಕಾರದ ಸಹಾಯಕ ಅಭಿಯಂತರ ಮಧು ಎನ್., ನಾಗರಿಕರೊಂದಿಗೆ ಸಂವಾದ ನಡೆಸಿ ಪ್ರಶ್ನೆಗಳಿಗೆ ಉತ್ತರಿಸಿದರು.

           ಮಂಜೇಶ್ವರ ಗ್ರಾ.ಪಂ. ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಯಾದವ ಬಡಾಜೆ ಈ ಸಂದರ್ಭ ಮಾತನಾಡಿ, ಶುದ್ದಜಲ ಉಪಯೋಗಿಸುವ ಸುವರ್ಣ ಅವಕಾಶ ಲಭಿಸಿದೆ. ಹಿತಮಿತವಾಗಿ ಬಳಸಿ ಆ ಮೂಲಕ ಗ್ರಾ.ಪಂ. ಮಾದರಿ ಗ್ರಾ.ಪಂ. ಆಗಿ ಮೂಡಿಬರಲಿ ಎಂದರು.

         ಗ್ರಾ.ಪಂ. ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕಿ ಎಂ. ಕಾರ್ಯಾಗಾರವನ್ನು ಉದ್ಘಾಟಿಸಿ ನನಗಾಗಿ ಎಂಬ ಸ್ವಾರ್ಥ ಭಾವನೆಗಳಿಂದ ಹೊರತಾಗಿ ನಮಗೆಲ್ಲರಿಗೂ ಎಂಬ ಸಮಷ್ಠಿ ಭಾವದಲ್ಲಿ ನೀರನ್ನು ಸಮರ್ಥವಾಗಿ ಬಳಸಿ ನೀರಿನ ಬವಣೆಯಿಂದ ಪಾರಾಗಬೇಕಿದೆ ಎಂದರು.

            ಜಲಜೀವನ್ ಮಿಷನ್ ನ ಕಾರ್ಯನಿರ್ವಾಹಕಿ ದೀಪ್ತಿ ಎಸ್.ಕುಂಜತ್ತೂರು ಮಾತನಾಡಿ, ಜಲಜೀವನ ಮಿಷನ್ ನ ಪರಿಕಲ್ಪನೆ ಹಾಗೂ ಕಾರ್ಯಯೋಜನೆಯ ಕುರಿತು ಕೂಲಂಕಶವಾಗಿ ವಿವರಿಸಿ ಸರ್ಕಾರ ಹಮ್ಮಿಕೊಂಡಿರುವ ಮಹತ್ತರ ಕಾರ್ಯಗಳು, ಅನುಷ್ಠಾನ ವಿವರಗಳು ಸಮಗ್ರವಾಗಿ ತಿಳಿಸಿದರು. 

             ಸಿಡಿಎಸ್ ಅಧ್ಯಕ್ಷೆ ಜ್ಯೋತಿ ಸ್ವಾಗತಿಸಿ, ಗ್ರಾ.ಪಂ.ಕಾರ್ಯದರ್ಶಿ ಸ್ಮಿತಾ ವಂದಿಸಿದರು. ದೀಪ್ತಿ ಎಸ್.ಕುಂಜತ್ತೂರು ಕಾರ್ಯಕ್ರಮ ನಿರೂಪಿಸಿದರು. ಸುರೇಖಾ ಪ್ರಾರ್ಥಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries