ಮಧುಮೇಹ ಅಥವಾ ಡಯಾಬಿಟಿಸ್ ಎನ್ನುವುದು ವಯಸ್ಕರಲ್ಲಿ ಮಾತ್ರವಲ್ಲ, ಮಕ್ಕಳಲ್ಲಿಯೂ ಸಾಮಾನ್ಯವಾಗಿದೆ. ಆದರೆ, ಮಕ್ಕಳಲ್ಲಿ ಈ ಸ್ಥಿತಿಯನ್ನು ತಡೆಗಟ್ಟಲು ಪೋಷಕರು ಅನೇಕ ಕಾರ್ಯಗಳನ್ನು ಮಾಡಬಹುದು. ಅದೇನೆಂದರೆ, ಪೋಷಕರನ್ನ ನೋಡಿ, ಮಕ್ಕಳು ಕಲಿಯುತ್ತಾರೆ ಎಂಬ ಮಾತಿದೆ. ಅದೇ ರೀತಿ, ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಮಧುಮೇಹವನ್ನು ನಿಮ್ಮ ಇಡೀ ಕುಟುಂಬದಿಂದಲೇ ದೂರವಿಡಬಹುದು.
ಸರಳ ಜೀವನಶೈಲಿಯ ಬದಲಾವಣೆಗಳು ಟೈಪ್ 2 ಮಧುಮೇಹದ ಆಕ್ರಮಣವನ್ನು ತಡೆಯಲು ಸಹಾಯ ಮಾಡುತ್ತದೆ. ಸ್ಥೂಲಕಾಯತೆ, ಅಧಿಕ ಕೊಲೆಸ್ಟ್ರಾಲ್ ಅಥವಾ ಮಧುಮೇಹದ ಕೌಟುಂಬಿಕ ಇತಿಹಾಸವಿದ್ದರೆ, ಇದು ಮತ್ತಷ್ಟು ಮುಖ್ಯವಾಗಿದೆ.
ಇಲ್ಲಿ ನಾವು ಮಕ್ಕಳಲ್ಲಿ ಮಧುಮೇಹ ಬರದೇ ಇರಲು, ಅನುಸರಿಸಬೇಕಾದ ಜೀವನಶೈಲಿ ಕ್ರಮಗಳನ್ನು ವಿವರಿಸಿದ್ದೇವೆ:ಕ್ರಿಯಾಶೀಲರಾಗಿರಿ: ಈ ದಿನಗಳಲ್ಲಿ, ಮಕ್ಕಳು ಹೆಚ್ಚಾಗಿ ಮೊಬೈಲ್, ಟಿವಿ ಅಥವಾ ಕಂಪ್ಯೂಟರ್ ಗಳಿಗೆ ಅಂಟಿಕೊಂಡಿರುತ್ತಾರೆ. ಇದಲ್ಲದೇ, ಸಾಂಕ್ರಾಮಿಕವು ಅವರ ದೈಹಿಕ ಚಟುವಟಿಕೆಯನ್ನು ಇನ್ನಷ್ಟು ಕಡಿಮೆ ಮಾಡಿದೆ. ಇದರಿಂದ ಸ್ಥೂಲಕಾಯತೆಯಂತಹ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಮಕ್ಕಳ ಜೊತೆ ನಡೆಯಲು ಹೋಗಿ, ಅವರೊಂದಿಗೆ ಚೆಂಡಾಟ ಆಡಿ, ಅವರು ಇಷ್ಟಪಡುವ ದೈಹಿಕ ಕ್ರೀಡೆಗಳನ್ನು ಆಡಿ. ಮಕ್ಕಳಿಗೆ ಪ್ರತಿದಿನ ಕನಿಷ್ಠ 60 ನಿಮಿಷಗಳ ದೈಹಿಕ ಚಟುವಟಿಕೆಯ ಅಗತ್ಯವಿದೆ.
ತೂಕವನ್ನು ನಿರ್ವಹಿಸಿ: ನಿಮ್ಮ ಮಗು ಅಧಿಕ ತೂಕ ಹೊಂದಿದ್ದರೆ, ತೂಕವನ್ನು ಕಳೆದುಕೊಳ್ಳುವುದು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಅವರೊಂದಿಗೆ ಈ ವಿಚಾರದ ಬಗ್ಗೆ ಮಾತನಾಡಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ತೂಕವನ್ನು ಕಳೆದುಕೊಳ್ಳುವುದು ಏಕೆ ಮುಖ್ಯ ಎಂದು ಅವರಿಗೆ ಅರ್ಥಮಾಡಿಸಿ.
ಸಕ್ಕರೆಯನ್ನು ಕಡಿಮೆ ಮಾಡಿ: ಮಕ್ಕಳು ಹೆಚ್ಚಾಗಿ ಸಿಹಿಯನ್ನು ಇಷ್ಟಪಡುತ್ತಾರೆ. ಆದರೆ ನೀವು ಅದರ ಮೇಲೆ ಒಂದು ಕಣ್ಣಿಡಬೇಕು. ಏಕೆಂದರೆ, ಅತಿಯಾದ ಸಕ್ಕರೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಅವರ ಸಕ್ಕರೆ ಸೇವನೆಯನ್ನು ಮಿತಿಗೊಳಿಸಬೇಕು. ಅವರಿಗೆ ಮಿಠಾಯಿ, ಜ್ಯೂಸ್‌ಗಳು ಮತ್ತು ಇತರ ಸಂಸ್ಕರಿಸಿದ ಆಹಾರಗಳನ್ನು ಎಲ್ಲಾ ಸಮಯದಲ್ಲೂ ನೀಡಬೇಡಿ.

ಆರೋಗ್ಯಕರ ತಿಂಡಿಗಳನ್ನು ನೀಡಿ: ಅವರಿಗೆ ಚಿಕ್ಕಂದಿನಿಂದಲೇ ಹಣ್ಣು, ಧಾನ್ಯದಂತಹ ಆರೋಗ್ಯಕರ ಆಹಾರ ಕೊಡುವುದರತ್ತ ಗಮನ ಹರಿಸಿ. ಒಂದು ಸಮಯಕ್ಕೆ ಒಂದು ಆಹಾರವನ್ನು ಪರಿಚಯಿಸುವುದನ್ನು ಖಚಿತಪಡಿಸಿಕೊಳ್ಳಿ, ಇದರಿಂದ ಅವರು ಅದರ ರುಚಿಯನ್ನು ಬೆಳೆಸಿಕೊಳ್ಳಬಹುದು.
ಪರದೆಯ ಸಮಯವನ್ನು ಮಿತಿಗೊಳಿಸಿ: ಈಗಾಗಲೇ ಹೇಳಿದಂತೆ, ಹೆಚ್ಚಿನ ಸಮಯವನ್ನು ಮೊಬೈಲ್, ಟಿವಿ ಮುಂದೆಯೇ ಕಳೆಯುತ್ತಾರೆ. ಇದರಿಂದ ಕಣ್ಣಿನ ಸಮಸ್ಯೆಗಳು, ನಿದ್ರೆಯ ಸಮಸ್ಯೆಗಳು ಮತ್ತು ಕಡಿಮೆ ದೈಹಿಕ ಚಟುವಟಿಕೆಗೆ ಕಾರಣವಾಗಬಹುದು. ಆದ್ದರಿಂದ ಈ ಪರದೆಯನ್ನು ನೋಡುವುದನ್ನು ಆದಷ್ಟು ಮಿತಗೊಳಿಸಲು ಪ್ರಯತ್ನಿಸಿ.
ರಾತ್ರಿ ಊಟ ಸಮಯಕ್ಕೆ ಸರಿಯಾಗಿ ಮಾಡಿ: ರಾತ್ರಿಯ ಊಟ, ವಾಸ್ತವವಾಗಿ, ಸರಿಯಾದ ಸಮಯದಲ್ಲಿ ಆಗಬೇಕು. ಇವುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಉತ್ತಮ ಮಾರ್ಗವಾಗಿದೆ. ಆದ್ದರಿಂದ ಊಟದ ವೇಳೆ ಟಿವಿ ಆಫ್ ಮಾಡಿ. ತಿನ್ನುವಾಗ ಯಾವುದೇ ರೀತಿಯ ಗೊಂದಲವನ್ನು ತಪ್ಪಿಸಿ.