ಕೊಚ್ಚಿ: ವರದಕ್ಷಿಣೆ ಕಿರುಕುಳದಿಂದ ಕಾನೂನು ವಿದ್ಯಾರ್ಥಿನಿ ಮೋಫಿಯಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಸಿಐಎ ವಿರುದ್ಧ ಇಲಾಖೆ ಮುಖ್ಯಸ್ಥರು ಕ್ರಮ ಕೈಗೊಂಡಿದ್ದಾರೆ. ಆಲುವಾ ಸಿಐ ಸುಧೀರ್ ಅವರನ್ನು ಠಾಣೆಯ ಉಸ್ತುವಾರಿಯಿಂದ ವಜಾಗೊಳಿಸಲಾಗಿದೆ. ಮಹಿಳೆಯ ದೂರಿನ ತನಿಖೆ ನಡೆಸಲು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸೋಮವಾರ ಅಲುವಾ ಪೋಲೀಸ್ ಠಾಣೆಗೆ ತೆರಳಿ ದೂರುಕೊಟ್ಟ ಮಹಿಳೆ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೊಫಿಯಾಳ ಆತ್ಮಹತ್ಯೆ ಪತ್ರದ ಪ್ರಕಾರ, ದೂರು ನೀಡಲು ಬಂದ ಮೋಫಿಯಾ ಮತ್ತು ಅವಳ ತಂದೆಯೊಂದಿಗೆ ಸಿಐಎ ಸುಧೀರ್ ಅನುಚಿತವಾಗಿ ವರ್ತಿಸಿದ್ದಾನೆ. ಜೊತೆಗೆ ಸುಧೀರ್ ತನ್ನ ಮೇಲೆ ದೌರ್ಜನ್ಯ ಎಸಗಿದ್ದ ಎಂದು ಮೋಫಿಯಾ ತಂದೆ ಬಹಿರಂಗಪಡಿಸಿದ್ದಾರೆ. ಇದನ್ನೆಲ್ಲ ಆಧರಿಸಿ ಸುಧೀರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಸಿಐಎ ಸುಧೀರ್ ಎಂಬಾತ ಈಗಾಗಲೇ ಬೇರೆ ದೂರುಗಳಲ್ಲಿ ತನಿಖೆಗೆ ಒಳಗಾಗಿ ಕಾನೂನು ಕ್ರಮ ಜರುಗಿಸಿರುವ ಅಧಿಕಾರಿ. ಈ ಹಿಂದೆ ದುರಂತ ಸಾವಿಗಳಗಾದ ಉತ್ತರ ಅಂಚಲ್ ಹತ್ಯೆಯ ತನಿಖೆಯಿಂದ ಸುಧೀರ್ ನನ್ನು ಕೈಬಿಡಲಾಗಿತ್ತು. ಉತ್ತರಾಳ ಸಾವು ಸಾಮಾನ್ಯ ಹಾವು ಕಡಿತ ಎಂದು ಸುಧೀರ್ ಸ್ಪಷ್ಟಪಡಿಸಲು ಪ್ರಯತ್ನಿಸುತ್ತಿದ್ದರು. ಇಲಾಖಾ ತನಿಖೆ ಪ್ರಗತಿಯಲ್ಲಿರುವಾಗಲೇ ಮತ್ತೆ ತನಿಖೆಯ ವೈಫಲ್ಯಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.