ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಮಾತ್ರೆಯಾದ ಮೆರ್ಕ್‌ನ ಮೊಲ್ನುಪಿರವಿರ್ ಅನ್ನು ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಮಾಡಲಾಗುತ್ತದೆ ಎಂದು ಸಿಎಸ್‌ಐಆರ್‌ನ ಕೋವಿಡ್ ಸ್ಟ್ರಾಟಜಿ ಗ್ರೂಪ್‌ನ ಅಧ್ಯಕ್ಷ ಡಾ. ರಾಮ್ ವಿಶ್ವಕರ್ಮ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಈ ಮಾತ್ರೆಯನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆಯಿಂದ ಅನುಮೋದನೆ ಪಡೆದು ಭಾರತದಲ್ಲೇ ಇದನ್ನು ತಯಾರಿ ಮಾಡುವ ಸಾಧ್ಯತೆಗಳ (ಮೇಡ್ ಇನ್ ಇಂಡಿಯಾ) ಬಗ್ಗೆ ಮಾತನಾಡಿದ ಡಾ. ರಾಮ್ ವಿಶ್ವಕರ್ಮ, "ಮೊಲ್ನುಪಿರವಿರ್ ಈಗಾಗಲೇ ನಮಗೆ ಲಭ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ. ಔಷಧ ತಯಾರಿಕ ಕಂಪನಿಯೊಂದಿಗೆ ಐದು ಕಂಪನಿಗಳು ಕೂತು ಮಾತುಕತೆ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ಮೊಲ್ನುಪಿರವಿರ್ ಅನ್ನು ಅನುಮೋದಿಸುತ್ತೇವೆ ಎಂದು ನಾನು ಭಾವಿಸುತ್ತೇನೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ."ಈ ಕೊರೊನಾ ವೈರಸ್ ಸಾಂಕ್ರಾಮಿಕವು ಎಲ್ಲೆಡೆ ಹರಡಿರುವ ಸಂದರ್ಭದಲ್ಲಿ ನಾವು ಈ ಕೊರೊನಾ ವೈರಸ್ ಸೋಂಕಿನ ವಿರುದ್ಧದ ಮಾತ್ರೆಗಳು ಕೋವಿಡ್ ವಿರುದ್ಧ ಔಷಧಿಗಿಂತ ಅಧಿಕ ಪರಿಣಾಮಕಾರಿ ಆಗಲಿದೆ," ಎಂದು ಹೇಳಿದ್ದಾರೆ.
ಈ ಕೋವಿಡ್ ವಿರುದ್ಧದ ಮಾತ್ರೆಗಳನ್ನು ಡಾ. ರಾಮ್ ವಿಶ್ವಕರ್ಮ, "ವಿಜ್ಞಾನವು ಕೊರೊನಾ ವೈರಸ್‌ನ ಶವಪೆಟ್ಟಿಗೆಗೆ ಹೊಡೆಯುವ ಅಂತಿಮ ಮೊಳೆ," ಎಂದು ಉಲ್ಲೇಖ ಮಾಡಿದ್ದಾರೆ. "ಮೊಲ್ನುಪಿರವಿರ್ ಈಗಾಗಲೇ ನಮಗೆ ಲಭ್ಯವಾಗಲಿದೆ. ಔಷಧ ತಯಾರಿಕ ಕಂಪನಿಯೊಂದಿಗೆ ಐದು ಕಂಪನಿಗಳು ಕೂತು ಮಾತುಕತೆ ನಡೆಸುತ್ತಿದೆ. ಕೆಲವೇ ದಿನದಲ್ಲಿ ಭಾರತದಲ್ಲಿ ಈ ಮಾತ್ರೆಗಳಿಗೆ ಅನುಮೋದನೆ ದೊರೆಯಬಹುದು," ಎಂದು ಉಲ್ಲೇಖ ಮಾಡಿದ್ದಾರೆ. "ಯುಕೆ ನಿಯಂತ್ರಕರು ಕೋವಿಡ್ ವಿರುದ್ಧದ ಈ ಮೆರ್ಕ್‌ನ ಮಾತ್ರೆಯನ್ನು ಅನುಮೋದನೆ ಮಾಡುವ ಮುನ್ನವೇ ಮೊಲ್ನುಪಿರಾವಿರ್‌ನ ಡೇಟಾ ಇಲ್ಲಿನ ನಿಯಂತ್ರಕರಲ್ಲಿ ಇದೆ. ಈಗಾಗಲೇ ಎಸ್‌ಇಸಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಈ ಮಾತ್ರೆಗಳಿಗೆ ಅನುಮೋದನೆ ದೊರೆಯಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ. ಇನ್ನು "ಮುಂದಿನ ಒಂದು ತಿಂಗಳೊಳಗೆ, ಮೆರ್ಕ್ ಔಷಧಿಗೆ ಅನುಮೋದನೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು," ಎಂದು ಕೂಡಾ ತಿಳಿಸಿದರು.
ಮೆರ್ಕ್ ಈಗಾಗಲೇ ಐದು ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಮೆರ್ಕ್ ಹಲವಾರು ಕಂಪನಿಗಳಿಗೆ ಈ ಪರವಾನಗಿಯನ್ನು ನೀಡಿದ ರೀತಿಯಲ್ಲಿ, ಫೈಜರ್ ಸಂಸ್ಥೆಗೂ ಕೂಡಾ ಪರವಾನಗಿ ದೊರೆಯಬಹುದು. ಜಾಗತಿಕ ಬಳಕೆಗೆ ಅಗತ್ಯವಿರುವ ಔಷಧಿಗಳನ್ನು ತಯಾರಿ ಮಾಡಲು ಫೈಜರ್ ಭಾರತೀಯ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕಾಗುತ್ತದೆ," ಎಂದರು. ಕೋವಿಡ್ ಮಾತ್ರೆಯ ಬೆಲೆ ಎಷ್ಟು ಇರಬಹುದು? ಇನ್ನು ಈ ಸಂದರ್ಭದಲ್ಲೇ ಈ ಔಷಧಿಯ ಬೆಲೆಯ ಬಗ್ಗೆ ಸಿಎಸ್‌ಐಆರ್‌ನ ಕೋವಿಡ್ ಸ್ಟ್ರಾಟಜಿ ಗ್ರೂಪ್‌ನ ಅಧ್ಯಕ್ಷ ಡಾ. ರಾಮ್ ವಿಶ್ವಕರ್ಮ ಮಾತನಾಡಿದ್ದಾರೆ. ಮೆರ್ಕ್‌ನ ಲಸಿಕೆಗಿಂತ ಮೆರ್ಕ್‌ನ ಮಾತ್ರೆಗಳಿಗೆ ಯುಎಸ್‌ನಲ್ಲಿ 700 ಡಾಲರ್‌ಗಳಿಗಿಂತ ಕಡಿಮೆ ಆಗಿರುತ್ತದೆ. ಏಕೆಂದರೆ ಅಮೆರಿಕದಲ್ಲಿ ಹಲವಾರು ಕಾರಣದಿಂದಾಗಿ ಈ ಔಷಧಿ ದುಬಾರಿಯಾಗಿದೆ ಹಾಗೂ ಉತ್ಪಾದನೆಯ ವೆಚ್ಚದ ಕಾರಣದಿಂದಾಗಿ ಇದು ದುಬಾರಿ ಆಗಿಲ್ಲ," ಎಂದು ಮಾಹಿತಿ ನೀಡಿದ್ದಾರೆ. "ಭಾರತ ಸರ್ಕಾರದ ವಿಚಾರಕ್ಕೆ ನಾವು ಬರುವುದಾದರೆ, ಭಾರತ ಸರ್ಕಾರವು ಖಂಡಿತವಾಗಿ ದೊಡ್ಡ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ಖರೀದಿ ಮಾಡಲಿದೆ. ಹಾಗೆಯೇ ಖಂಡಿತವಾಗಿ ಭಾರತದಲ್ಲಿ ದ್ವಿಮುಖ ಬೆಲೆ ವ್ಯವಸ್ಥೆ ಇರುತ್ತದೆ. ಹಾಗೆಯೇ ಬೆಲೆ ವ್ಯವಸ್ಥೆಯು ನಮ್ಮನ್ನು ದಿಗ್ಬ್ರಮೆಗೊಳಿಸುವ ಸಾಧ್ಯತೆಗಳು ಇದೆ. ಮೊದಲು ಈ ಔಷಧಿಯಿಂದ ಸಂಪೂರ್ಣ ಚಿಕಿತ್ಸೆ ಪಡೆಯಲು 2000 ರಿಂದ 3000 ಅಥವಾ 4000 ರೂಪಾಯಿಗಳು ವೆಚ್ಚವಾಗಬಹುದು. ಆ ಬಳಿಕ ಈ ವೆಚ್ಚವು ಕಡಿಮೆ ಆಗಬಹುದು. ಅದು 500 ರಿಂದ 600 ಅಥವಾ 1,000 ರೂಪಾಯಿಗಳಿಗೆ ಇಳಿಯಬಹುದು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೋವಿಡ್ ವಿರುದ್ಧ ಮೆರ್ಕ್‌ನ ಮಾತ್ರೆ ಅನುಮೋದಿಸಿದ ವಿಶ್ವದ ಮೊದಲ ರಾಷ್ಟ್ರ ಎಂಬ ಖ್ಯಾತಿಯನ್ನು ಯುಕೆ ಪಡೆದುಕೊಂಡಿದೆ. ಕೊವಿಡ್-19 ಸೋಂಕಿನ ಸೌಮ್ಯ, ಮಧ್ಯಮ ಹಾಗೂ ಸಾವಿನ ಅಪಾಯದಲ್ಲಿ ಇರುವವರ ಈ ಮಾತ್ರೆಗಳು ಚಿಕಿತ್ಸೆಗೆ ಹೆಚ್ಚು ಉಪಯುಕ್ತವಾಗಿದೆ. ಮೂರು ಹಂತಗಳಲ್ಲಿ ವೈದ್ಯಕೀಯ ಪ್ರಯೋಗಗಳಿಗೆ ಒಳಗಾದ ಮಾತ್ರೆಯು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಅಪಾಯವನ್ನು ತಗ್ಗಿಸುತ್ತದೆ ಎಂದು ಕಂಪನಿ ಹೇಳಿದೆ.