ಕಾಸರಗೋಡು: ಶುಚೀಕರಣ ಅಭಿಯಾದ ಸಮಾರೋಪ ಜರುಗಿತು. ಇದರ ಅಂಗವಾಗಿ ನಗರಸಭೆಯ ಸೀವ್ಯಾ ಪಾರ್ಕ್ ಶುಚೀಕರಣ ನಡೆಸಲಾಯಿತು.
ಕೇಂದ್ರ ಸರಕಾರದ ಆಝಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮ ಅಂಗವಾಗಿ ಕಾಸರಗೋಡು ನೆಹರೂ ಯುವಕೇಂದ್ರ, ಕಾಸರಗೋಡುನಗರಸಭೆ, ಕಾಸರಗೋಡು ಸರಕಾರಿ ಕಾಲೇಜಿನ ಎನ್.ಎಸ್.ಎಸ್. ಯೂನಿಟ್ ಜಂಟಿ ವತಿಯಿಂದ ಅ.1ರಿಂದ 31 ವರೆಗೆ ನಡೆಸಲಾದ ಶುಚೀಕರಣ ಮತ್ತು ಪ್ಲಾಸ್ಟಿಕ್ ಸಂಗ್ರಹ ಅಭಿಯಾನದ ಸಮಾರೋಪ ಈ ವೇಳೆ ನಡೆದಿದೆ.
ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷೆ ಷಂಸೀದಾ ಫಿರೋಝ್ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯರಾದ ಝಕರಿಯಾ, ಮುಹಮ್ಮದ್ ಕುಂuಟಿಜeಜಿiಟಿeಜ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಯೂತ್ ಅಧಿಕಾರಿ ಅಖಿಲ್ ಪಿ. ಸ್ವಾಗತಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಎನ್.ಎಸ್.ಎಸ್.ಯೂನಿಟ್ ಕಾರ್ಯದರ್ಶಿ ಜನಿತಾ ವಂದಿಸಿದರು.