ಈ ಕುರಿತಂತೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಇಕೆವೈಸಿ ಪ್ರಕ್ರಿಯೆ ಸಂದರ್ಭದಲ್ಲಿ, ಆಫ್‌ಲೈನ್ ವ್ಯವಸ್ಥೆ ಮೂಲಕವೂ ಆಧಾರ್ ದೃಢೀಕರಿಸಲು ಅವಕಾಶ ಕಲ್ಪಿಸಿದೆ.
ಯುಐಡಿಎಐ ಈಗಾಗಲೇ ಕ್ಯೂಆರ್ ಕೋಡ್ ದೃಢೀಕರಣ, ಆಧಾರ್ ಪೇಪರ್‌ರಹಿತ ಇ-ಕೆವೈಸಿ ದೃಢೀಕರಣ, ಇ-ಆಧಾರ್ ದೃಢೀಕರಣ ಮತ್ತು ಆಫ್‌ಲೈನ್ ಪೇಪರ್-ಆಧಾರಿತ ದೃಢೀಕರಣ ಮತ್ತು ಇತರ ಆಫ್‌ಲೈನ್ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಿದೆ.
ಹೊಸ ಮಾದರಿಯಲ್ಲಿ, ಯುಐಡಿಎಐ ನೀಡುವ ಡಿಜಿಟಲ್ ಸಹಿ ಇರುವ ದಾಖಲೆಯನ್ನು, ಆಫ್‌ಲೈನ್ ಇ-ಕೆವೈಸಿ ಸಂದರ್ಭದಲ್ಲಿ ಬಳಸಬಹುದಾಗಿದೆ.
ಅದರಲ್ಲಿ ಆಧಾರ್‌ನ ಕೊನೆಯ ನಾಲ್ಕು ಸಂಖ್ಯೆಗಳು ಮತ್ತು ಆಧಾರ್‌ನಲ್ಲಿರುವ ಇತರ ವಿವರ, ಫೋಟೊ ಕೂಡ ಇರಲಿದೆ.
ಉಳಿದಂತೆ, ಒಟಿಪಿ ಆಧಾರಿತ ದೃಢೀಕರಣ ಮತ್ತು ಬಯೋಮೆಟ್ರಿಕ್ಸ್ ದೃಢೀಕರಣ ವ್ಯವಸ್ಥೆಗಳೂ ಇರಲಿದೆ.