HEALTH TIPS

ನೌಕಾಪಡೆಗೆ ಜಲಾಂತರ್ಗಾಮಿ 'ಐಎನ್‌ಎಸ್‌ ವೇಲಾ' ಹಸ್ತಾಂತರ

              ಮುಂಬೈ: ಮಜಗಾಂವ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ (ಎಂಡಿಎಲ್‌) ನಿರ್ಮಿತ 'ಸ್ಕಾರ್ಪಿಯಾನ್‌' ಸರಣಿಯ ನಾಲ್ಕನೇ ಜಲಾಂತರ್ಗಾಮಿ 'ಐಎನ್‌ಎಸ್‌ ವೇಲಾ'ವನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ.

              'ಪ್ರಾಜೆಕ್ಟ್‌ ಪಿ-75'ಅಡಿ ನಿರ್ಮಿಸಲಾಗಿರುವ ಈ ಜಲಾಂತರ್ಗಾಮಿ ಕಾರ್ಯಾಚರಣೆಗೆ ಶೀಘ್ರವೇ ಚಾಲನೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

           ಮಹತ್ವಾಕಾಂಕ್ಷೆಯ 'ಆತ್ಮನಿರ್ಭರ ಭಾರತ' ಹಾಗೂ 'ಮೇಕ್‌ ಇನ್‌ ಇಂಡಿಯಾ' ಯೋಜನೆಗಳಡಿ ಈ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ.

            'ವೇಲಾ' ಹಸ್ತಾಂತರದ ಮೂಲಕ ನೌಕಾಪಡೆಯ ಅಗತ್ಯಗಳಿಗೆ ತಕ್ಕಂತೆ ಹಡಗುಕಟ್ಟೆಗಳ ನಿರ್ಮಾಣ ಹಾಗೂ ಜಲಾಂತರ್ಗಾಮಿಗಳ ಅಭಿವೃದ್ಧಿಯಲ್ಲಿ ಎಂಡಿಎಲ್‌ ತನ್ನ ಸಾಮರ್ಥ್ಯ- ವೃತ್ತಿಪರತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

               ಈಗಾಗಲೇ ಐಎನ್‌ಎಸ್‌ ಕಲ್ವರಿ, ಐಎನ್‌ಎಸ್‌ ಖಂಡೇರಿ ಹಾಗೂ ಐಎನ್‌ಎಸ್‌ ಕಾರಂಜ್ ಜಲಾಂತರ್ಗಾಮಿಗಳನ್ನು ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ಇದರೊಂದಿಗೆ ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ನಿರ್ಮಿಸುವ ದೇಶಗಳ ಸಾಲಿಗೆ ಭಾರತವೂ ಸೇರಿದಂತಾಗಿದೆ.

ಐದನೇ ಜಲಾಂತರ್ಗಾಮಿ ಐಎನ್‌ಎಸ್‌ ವಾಗಿರ್ ಇದೇ ಡಿಸೆಂಬರ್‌ಗೆ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ. ಆರನೇ ಜಲಾಂತರ್ಗಾಮಿ 'ಐಎನ್‌ಎಸ್‌ ವಾಗ್ಶೀರ್‌' ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries