ವಯಸ್ಸಾದಾಗ ನೆರೆ ಕೂದಲು ಉಂಟಾಗುವುದು ಪ್ರಕೃತ್ತಿ ಸಹಜ ನಿಯಮ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ನೆರೆಕೂದಲಿನ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿದೆ. ಮಕ್ಕಳು ಹೈಸ್ಕೂಲ್ ತಲುಪುವಾಗಲೇ ಕೂದಲು ಬಿಳಿಯಾಗಲಾರಂಭಿಸುತ್ತದೆ.
ಅಕಾಲಿಕ ನೆರೆಕೂದಲು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಆಹಾರದಲ್ಲಿ ಅಸಮತೋಲನ, ಫಾಸ್ಟ್ ಫುಡ್ ತುಂಬಾ ತಿನ್ನುವುದು, ತಲೆ ಕೂದಲಿನ ಆರೈಕೆ, ಕೂದಲಿಗೆ ಪೋಷಕಾಂಶದ ಕೊರತೆ ಹೀಗೆ ಅನೆಕ ಕಾರಣಗಳಿಂದ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತದೆ.
ಕೂದಲಿನ ಆರೋಗ್ಯಕ್ಕೆ ಬಿ 12, ಕಬ್ಬಿಣದಂಶ, ಒಮೆಗಾ 3 ಅವಶ್ಯಕ. ಸಲಾಡ್, ಮೀನು, ಚಿಕನ್, ಹಣ್ಣುಗಳು, ಸೊಪ್ಪು, ತರಕಾರಿಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕು. ಅಲ್ಲದೆ ಎಳನೀರು,ನಿಂಬು ಪಾನೀಯ, ತಾಜಾ ಹಣ್ಣಿನ ಜ್ಯೂಸ್ ಇವುಗಳನ್ನು ಸೇವಿಸಬೇಕು. ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಇದರ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಬೇಕು. ಏನಾದರೂ ಆರೋಗ್ಯ ಸಮಸ್ಯೆವಿದ್ದರೆ ಇದರಿಂದಾಗಿ ಕೂಡ ಅಕಾಲಿಕ ನೆರೆ ಉಂಟಾಗಬಹುದು. ನೆರೆಕೂದಲು ತಡೆಗಟ್ಟಲು ಈ ಎಲ್ಲಾ ಅಂಶಗಳು ಮುಖ್ಯವಾಗುತ್ತದೆ. ಇದರ ಜೊತೆಗೆ ಕೂದಲನ್ನು ಈ ರೀತಿ ಆರೈಕೆ ಮಾಡುವುದರಿಂದ ನೆರೆ ಕೂದಲನ್ನು ತಡೆಗಟ್ಟಬಹುದಾಗಿದೆ:
1. ನೆಲ್ಲಿಕಾಯಿ ಪುಡಿ 1 ಕಪ್ ನೆಲ್ಲಿಕಾಯಿ ಪುಡಿಯನ್ನು ಕಬ್ಬಿಣದ ಪಾತ್ರದಲ್ಲಿ ಹಾಕಿ ಅದು ಬೂದಿಯಾಗುವವರೆಗೆ ಬಿಸಿ ಮಾಡಿ. ಇದಕ್ಕೆ ಅರ್ಧ ಲೀಟರ್ ತೆಂಗಿನೆಣ್ಣೆ ಅತಿ ಕಡಿಮೆ ಉರಿಯಲ್ಲಿ 20 ನಿಮಿಷ ಕಾಯಿಸಿ. ನಂತರ 24 ಗಂಟೆ ಗಂಟೆ ಇಡಿ. ನಂತರ ಸೋಸಿ ಒಂದು ಡಬ್ಬದಲ್ಲಿ ಹಾಕಿಡಿ. ನಂತರ ಈ ಎಣ್ಣೆಯಿಂದ ವಾರದಲ್ಲಿ ಎರಡು ಬಾರಿ ಮಸಾಜ್ ಮಾಡಿ.
2. ಕರಿಬೇವಿನ ಎಲೆ 1 ದೊಡ್ಡ ಕಪ್ ತುಂಬಾ ಕರಿಬೇವಿನ ಎಲೆ ಹಾಕಿ ರುಬ್ಬಿ ಅದಕ್ಕೆ 2 ಚಮಚ ನೆಲ್ಲಿಕಾಯಿ ಪುಡಿ, 2 ಚಮಚ ಬ್ರಾಹ್ಮಿ ಪುಡಿ ಸೇರಿಸಿ. ಇದನ್ನು ತಲೆಗೆ ಹಚ್ಚಿ, ಇದನ್ನು ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ, ಒಂದು ಗಂಟೆ ಬಿಟ್ಟು ಹರ್ಬಲ್ ಶ್ಯಾಂಪೂ ಬಳಸಿ ತಲೆ ತೊಳೆಯಿರಿ.
3. ಟೀ ಪುಡಿ ಸೇರಿಸಿ ಮೆಹಂದಿ ಹಚ್ಚಿ ಇನ್ನು ನೆರೆ ಕೂದಲನ್ನು ಕಪ್ಪಾಗಿಸಲು ಟೀ ಪುಡಿ ಹಾಕಿ ಕುದಿಸಿ ಅದಕ್ಕೆ ಮೆಹಂದಿ ಸೇರಿಸಿ ಕುಡಿಯಿರಿ. ಇದು ಕೂದಲು ಕಪ್ಪಾಗಿ ಕಾಣುವಂತೆ ಮಾಡುವುದು.
4. ತೆಂಗಿನೆಣ್ಣೆ ತೆಂಗಿನೆಣ್ಣೆ ಮತ್ತು ನಿಂಬೆ ರಸ ಮಿಕ್ಸ್ ಮಾಡಿ ಹಚ್ಚುತ್ತಿದ್ದರೆ ನಿಧಾನಕ್ಕೆ ಬೆಳ್ಳಗಾದ ಕೂದಲು ಕಪ್ಪು ಬಣ್ಣಕ್ಕೆ ತಿರುಗುವುದು.
5. ಬ್ಲ್ಯಾಕ್ ಟೀ ಬ್ಲ್ಯಾಕ್ ಟೀ ಬಳಸುವುದರಿಂದ ಅಕಾಲಿಕ ನೆರೆಯನ್ನು ತಡೆಗಟ್ಟಬಹುದು. ತಲೆ ತೊಳೆದ ಬಳಿಕ ಬ್ಲ್ಯಾಕ್ ಟೀ ನೀರನ್ನು ತಲೆಗೆ ಹಾಕಿ. ಒಂದು ಮಗ್‌ನಷ್ಟು ಬಿಸಿ ನೀರಿಗೆ ಟೀ ಪುಡಿ ಹಾಕಿ ಕುದಿಸಿ ಅದನ್ನು ಸೋಸಿ ತಣ್ಣಗಾಗಲು ಇಡಿ. ಇದಕ್ಕೆ ಸ್ವಲ್ಪ ನಿಂಬೆ ರಸ ಮಿಕ್ಸ್ ಮಾಡಿ ತಲೆಗೆ ಹಚ್ಚಿ.
6. ಹರ್ಬಲ್ ಮಿಕ್ಸ್ 1 ಚಮಚ ನೆಲ್ಲಿಕಾಯಿ ಪುಡಿ, 2 ಚಮಚ ಬ್ಲ್ಯಾಕ್ ಟೀ, 1 ಚಮಚ ಸ್ಟ್ರಾಂಗ್ ಕಾಫಿ (ಬ್ಲ್ಯಾಕ್ ಕಾಫಿ) , ಅರ್ಧ ತುಂಡು ಅಂಡ್ವಾಳ ಕಾಯಿ, 1 ತುಂಡು ವಾಲ್ನಟ್ ಮರದ ತೊಗಟೆ, 1 ಚಮಚ ಇಂಡಿಗೋ ( indigo), 1 ಚಮಚ ಬ್ರಾಹ್ಮಿ ಪುಡಿ, 1 ಚಮಚ ತ್ರಿಫಲಾ ಪುಡಿ.