ಕಾಸರಗೋಡು: ಕೇಂದ್ರ ಸರ್ಕಾರ ಕೃಷಿಕರ ಅಗತ್ಯಗಳಿಗಾಗಿ ಸಣ್ಣ ಮೊತ್ತದ ಬಡ್ಡಿಯೊಂದಿಗೆ ನೀಡುವ ಮೊತ್ತವನ್ನು ಕೃಷಿಯೇತರ ಚಟುವಟಿಕೆಗಳಿಗೆ ಅಥವಾ ಅತಿಯಾದ ಬಡ್ಡಿಗೆ ಸಹಕಾರಿ ಬ್ಯಾಂಕುಗಳ ಮೂಲಕ ವಿತರಿಸುವ ಮೂಲಕ ಬಡ ಕೃಷಿಕರನ್ನು ಕೇರಳ ಸರ್ಕಾರ ವಂಚಿಸುತ್ತಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್ ಆರೋಪಿಸಿದ್ದಾರೆ.
ಅವರು ಕೇಂದ್ರ ಸರ್ಕಾರ ನಬಾರ್ಡ್‍ಮೂಲಕ ನೀಡುವ ಮೊತ್ತದ ದುರುಪಯೋಗ ನಡೆಸುತ್ತಿರುವ ಕೇರಳ ಸರ್ಕಾರದ ಧೋರಣೆ ಖಂಡಿಸಿ ಕೃಷಿಕಮೋರ್ಚಾ ಸೋಮವಾರ ಹಮ್ಮಿಕೊಂಡ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಕೃಷಿಕರ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದರೂ, ರಾಜ್ಯ ಸರ್ಕಾರ ಮಾತ್ರ ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಮುಂದಾಗುತ್ತಿಲ್ಲ. ಕೃಷಿನಾಶಗೈಯುವ ಕಾಡುಪ್ರಾಣಿಗಳ ಉಪಟಳ ನಿಗ್ರಹಕ್ಕೂ ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ. ಕೃಷಿಕರನ್ನು ಸಂರಕ್ಷಿಸಬೇಕಾದ ಸಹಕಾರಿ ವಲಯ, ಆಡಳತಾರೂಢ ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದ ಕಲುಷಿತಗೊಂಡಿದೆ. ಇದನ್ನು ಮನಗಂಡು ಕೇಂದ್ರ ಸರ್ಕಾರ ಗೃಹಸಚಿವ ಅಮಿತ್‍ಷಾ ನೇತೃತ್ವದಲ್ಲಿ ಸಹಕಾರಿ ವಲಯದ ಕಾಯಕಲ್ಪಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಕೃಷಿಕಮೋರ್ಚಾ ಜಿಲ್ಲಾಧ್ಯಕ್ಷ ಕುಞÂಕಣ್ಣನ್ ಬಳಾಲ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ವಲಯ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಮನು ಮೇಲತ್, ಪ್ರವೀಣ್‍ಚಂದ್ರ ಬಲ್ಲಾಳ್, ಎ.ಎಂ ಮುರಳೀಧರನ್, ಮುರಳೀಧರ ಯಾದವ್, ಪಿ.ಆರ್. ಸುನಿಲ್, ಪ್ರೊ. ಶಿಜು, ಎ.ಎಂ ಮುರಳೀಧರನ್, ಬೇಬಿ ಫ್ರಾನ್ಸಿಸ್, ನಾರಾಯಣನ್ ವಡಕ್ಕಿಣಿಯಾಲ್ ಉಪಸ್ಥಿತರಿದ್ದರು.